ದಾವಣಗೆರೆ :ಬಾಂಬ್ ಅವರು ಸ್ಪೋಟ ಮಾಡಬೇಕು. ನಮ್ಮ ಕಡೆ ಬಾಂಬ್ ಇಲ್ಲ. ಸ್ಪೋಟಕ್ಕಾಗಿ ಬಹುತೇಕರು ಗೋಕಾಕ್‌ದಲ್ಲಿ ಕಾಯುತ್ತಿದ್ದಾರೆ ಎಂದು ಸಹೋದರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಅವರು ಟಾಂಗ್ ನೀಡಿದರು. ದಾವಣಗೆರೆಯಲ್ಲಿ 'ಮಹಾನಾಯಕ'ನ ವಿಚಾರವಾಗಿ ಸಹೋದರ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಮಹಾನಾಯಕನ ವಿಚಾರದ ಬಗ್ಗೆ ರಮೇಶ್ ಜಾರಕಿಹೊಳಿ ಬಳಿ ಏನೋ ಮಾಹಿತಿ ಇದೆಯಂತೆ. ಇನ್ನಷ್ಟು ಸಚಿವರು ಇಂತಹ ಕಮೀಷನ್ ವಿಚಾರಕ್ಕೆ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇನ್ನೆಷ್ಟು ಜನ ಬಿಜೆಪಿ ಮುಖಂಡರು ಹಲಾಲ್ಗೊಳಗಾಗುತ್ತಾರೆ. ಈಶ್ವರಪ್ಪ ಕೇವಲ ರಾಜೀನಾಮೆ ಕೊಟ್ಟರೆ ಸಾಲದು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸತ್ಯಾಂಶ ಹೊರ ಬರಬೇಕು ಎಂದರು.
ಸ್ವಾಮೀಜಿಗಳನ್ನೂ ಬಿಟ್ಟಿಲ್ಲ ಈ ಕಮೀಷನ್ ಪಿಡುಗು