ಕರ್ನಾಟಕ

karnataka

ETV Bharat / state

ಸಂತೆಬೆನ್ನೂರು ಪೊಲೀಸರ ದಾಳಿ: ಅಕ್ರಮ ಸ್ಫೋಟಕ ವಶಕ್ಕೆ - ಅಕ್ರಮ ಸ್ಫೋಟಕ ವಶಕ್ಕೆ

ಸಂತೆಬೆನ್ನೂರು ಪೊಲೀಸರು ಅಕ್ರಮ ಸ್ಫೋಟಕ ದಾಸ್ತಾನು ಮೇಲೆ ದಾಳಿ ನಡೆಸಿ, ಕಾಶೀಪುರ ಗ್ರಾಮದ ಜಮೀನೊಂದರಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ಅಕ್ರಮವಾಗಿ ಪರವಾನಿಗೆ ಇಲ್ಲದ ಸಂಗ್ರಹಿಸಿಟ್ಟ ಸ್ಟೋಟಕಗಳ ವಶಕ್ಕೆ ಪಡೆದರು.

santebennuru-police-seized-illegal-explosives
ಅಕ್ರಮ ಸ್ಫೋಟಕ ವಶಕ್ಕೆ

By

Published : Apr 1, 2021, 3:33 AM IST

ದಾವಣಗೆರೆ:ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯ ಕಾಶಿಪುರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಟೋಟಕವನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಸಂತೆಬೆನ್ನೂರು ಪೊಲೀಸರು ಅಕ್ರಮ ಸ್ಫೋಟಕ ದಾಸ್ತಾನು ಮೇಲೆ ದಾಳಿ ನಡೆಸಿ, ಕಾಶೀಪುರ ಗ್ರಾಮದ ಜಮೀನೊಂದರಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ಅಕ್ರಮವಾಗಿ ಪರವಾನಿಗೆ ಇಲ್ಲದ ಸಂಗ್ರಹಿಸಿಟ್ಟ ಸ್ಟೋಟಕಗಳ ವಶಕ್ಕೆ ಪಡೆದರು. ಈ ವೇಳೆ ಪರ್ವೀಜ್ ಎನ್ನುವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿ ಗಿರೀಶ್ ಘಟಮನ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನ ಸ್ಥಳದಲ್ಲಿ 8 ಜಿಲೇಟಿನ್ ಕಡ್ಡಿ, ಒಂದು ಎಲೆಕ್ಟ್ರಾನಿಕ್ ಡಿಟೋನೇಟರ್, ಸೇರಿದಂತೆ ಹಲವು ಸ್ಟೋಟಕ ವಸ್ತುಗಳು ದೊರೆತಿವೆ. ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾರ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

...view details