ದಾವಣಗೆರೆ: ಬಜೆಟ್ನಲ್ಲಿ ಬಂಜಾರ ಸಮುದಾಯಕ್ಕೆ 300 ಕೋಟಿ ಮೀಸಲಿಡಬೇಕು ಎಂದು ಸಚಿವ ಪ್ರಭು ಚೌವ್ಹಾಣ್ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಬಜೆಟ್ನಲ್ಲಿ ಬಂಜಾರ ಸಮುದಾಯಕ್ಕೆ 300 ಕೋಟಿ ರೂ ನೀಡಬೇಕು: ಸಚಿವ ಪ್ರಭು ಚೌವ್ಹಾಣ್
ದಾವಣಗೆರೆಯ ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪ ಗ್ರಾಮದಲ್ಲಿ ಬಂಜಾರ ಸಮುದಾಯ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ನಡೆಯಿತು. ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಜಿಲ್ಲೆಯ ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪ ಗ್ರಾಮದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಮುದಾಯಕ್ಕೆ 300 ಕೋಟಿ ರೂ ಅನುದಾನ ಮೀಸಲಿಡಬೇಕು, ವಿಧಾನ ಪರಿಷತ್ ಸ್ಥಾನ ನಮ್ಮವರಿಗೆ ನೀಡಬೇಕು. ಸಿಎಂ ಯಡಿಯೂರಪ್ಪ ಇದನ್ನು ಮಾಡಿಯೇ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಕುಡಚಿ ಶಾಸಕ ರಾಜೀವ್ ಮಾತನಾಡಿ, ಯಡಿಯೂರಪ್ಪ ರಾಜಾಹುಲಿ, ಹೃದಯವಂತರು. ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ನಮ್ಮ ಸಮುದಾಯದ ಕೈಬಿಟ್ಟಿಲ್ಲ. ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ಸಮುದಾಯಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ಬಂಜಾರ ಕಲೆ ಹಾಗೂ ಭಾಷಾ ಅಕಾಡೆಮಿ ಸ್ಥಾಪನೆ ಸೇರಿದಂತೆ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.