ದಾವಣಗೆರೆ: ಸೋಂಕು ಹರಡುತ್ತಿರುವ ಹಿನ್ನೆಲೆ ನಿನ್ನೆ ಶಾಸಕ ರೇಣುಕಾಚಾರ್ಯ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ಬಳಿಕ ನಾಲ್ಕು ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಿ, ಸ್ವತಃ ತಾವೇ ಆ್ಯಂಬುಲೆನ್ಸ್ ಚಲಾಯಿಸಿದರು.
ರೇಣುಕಾಚಾರ್ಯರಿಂದ ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಣೆ ಔಷಧಿ ಸಿಂಪಡಣೆ ಯಂತ್ರ ಹಿಡಿದು ಸ್ವತಃ ಸ್ಯಾನಿಟೈಸೇಷನ್ ಮಾಡಿದರು. ಹೊನ್ನಾಳಿಯಲ್ಲಿ ಕೊರೊನಾ ಆರ್ಭಟಿಸುತ್ತಿರುವ ಹಿನ್ನೆಲೆ ಶಾಸಕರು ಹಗಲು ರಾತ್ರಿಯೆನ್ನದೇ ಕೊರೊನಾ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ:ಸವದತ್ತಿಯಲ್ಲಿ 15 ದಿನಗಳ ಅಂತರದಲ್ಲಿ ಮೂವರು ಸಹೋದರರು ಕೋವಿಡ್ಗೆ ಬಲಿ
ಸ್ಯಾನಿಟೈಸರ್ ಸಿಂಪಡಣೆ ಬಳಿಕ ಹೊನ್ನಾಳಿ-ನ್ಯಾಮತಿ ಜನರಿಗೆ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ನಾಲ್ಕು ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಲಾಯಿತು. ಶಾಸಕ ರೇಣುಕಾಚಾರ್ಯ ತಂದೆ-ತಾಯಿಯ ಸವಿನೆನಪಿಗಾಗಿ ಉಚಿತವಾಗಿ ನಾಲ್ಕು ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದ್ದು, ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭಾಗಿಯಾಗಿದ್ರು. ಬಳಿಕ ಶಾಸಕ ರೇಣುಕಾಚಾರ್ಯ ಸ್ವತಃ ಆ್ಯಂಬ್ಯುಲೆನ್ಸ್ ಓಡಿಸಿದರು.