ಕರ್ನಾಟಕ

karnataka

ETV Bharat / state

ಶಾಸಕರು ಬೆಳೆಸಿದ್ದ ಗಂಧದ ಮರಕ್ಕೆ ಕೊಡಲಿ ಹಾಕಿದ ಖದೀಮರು - ದಾವಣಗೆರೆ ಶಾಸಕ ಮಾಡಾಳ್

ಗಂಧದ ಮರಗಳಿಗೆ ಕಳ್ಳರು ಕೊಡಲಿ ಏಟು ಹಾಕಿದ್ದು, 4ನೇ ಬಾರಿಗೆ ಕಳ್ಳತನ ನಡೆದಿದೆ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

sandalwood-tree-cut-down-by-smugglers-in-davanagere
ಶಾಸಕರು ಬೆಳೆಸಿದ್ದ ಗಂಧದ ಮರಕ್ಕೆ ಕೊಡಲಿ ಹಾಕಿದ ಖದೀಮರು

By

Published : Mar 13, 2021, 8:06 PM IST

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದ ಶಾಸಕರ ಮನೆಯ ಕಾಂಪೌಂಡ್​​​ ಒಳಗಿದ್ದ ಪ್ಲಾಂಟ್​​ನಲ್ಲೇ ಗಂಧದ ಮರವನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಸೇರಿದ ಜಾಗದಲ್ಲಿದ್ದ ಮರಗಳನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ.

ಶಾಸಕರು ತಮ್ಮ ಮನೆ ಬಳಿ ಎರಡು ಎಕರೆ ಪ್ರದೇಶದಲ್ಲಿ ಗಂಧ, ತೇಗದ ವನ ಬೆಳೆಸಿದ್ದು, ಕಳೆದ 10 ವರ್ಷದಿಂದ ಮರಗಳು ಬೃಹದಾಕಾರವಾಗಿ ಬೆಳೆದಿದ್ದವು. ಇದನ್ನು ಗಮನಿಸಿದ್ದ ಕಳ್ಳರು, ಮರಗಳಿಗೆ ಕೊಡಲಿ ಹಾಕಿದ್ದಾರೆ. ಅಲ್ಲದೆ ಇದು ನಾಲ್ಕನೇ ಬಾರಿ ಕಳ್ಳತನ ನಡೆದಿದ್ದು, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕುಡಿದ ನಶೆಯಲ್ಲಿದ್ದ ಹೆತ್ತಮ್ಮನಿಂದ ಮಗುವಿನ ಮೇಲೆ ಭಯಂಕರ ಹಲ್ಲೆ.. ವಿಡಿಯೋ ವೈರಲ್​!

ABOUT THE AUTHOR

...view details