ದಾವಣಗೆರೆ: ಡ್ರಗ್ಸ್ ಮತ್ತು ಗಾಂಜಾ ವಿಚಾರ ಸ್ಯಾಂಡಲ್ವುಡ್ಗೆ ಅಷ್ಟೇ ಅಲ್ಲ, ರಾಜ್ಯಕ್ಕೇ ಕಳಂಕ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹೇಳಿದ್ದಾರೆ.
ಡ್ರಗ್ಸ್ ವಿಚಾರ ಸ್ಯಾಂಡಲ್ವುಡ್ ಅಷ್ಟೇ ಅಲ್ಲ, ರಾಜ್ಯಕ್ಕೇ ಕಳಂಕ: ನಟ ದರ್ಶನ್ - ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ
ಡ್ರಗ್ಸ್ ಜಾಲದಲ್ಲಿ ಯಾರ್ಯಾರಿದ್ದಾರೆ ಎಂಬುದು ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ನಟ, ಈ ನಟ ಜಾಲದಲ್ಲಿದ್ದಾರೆ ಎಂದು ವದಂತಿ ಹಬ್ಬಿಸಬೇಡಿ ಎಂದು ನಟ ದರ್ಶನ್ ಮನವಿ ಮಾಡಿದರು.
ನಗರದ ಬಾಪೂಜಿ ಗೆಸ್ಟ್ ಹೌಸ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡ್ರಗ್ಸ್ ಜಾಲದಲ್ಲಿ ಯಾರ್ಯಾರಿದ್ದಾರೆ ಎಂಬುದು ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ನಟ, ಈ ನಟ ಜಾಲದಲ್ಲಿದ್ದಾರೆ ಎಂದು ವದಂತಿ ಹಬ್ಬಿಸಬೇಡಿ. ಕಾಯೋಣ, ವಿನಾ ಕಾರಣ ಏನನ್ನೋ ತೋರಿಸಬೇಡಿ ಎಂದು ಮನವಿ ಮಾಡಿದರು. ನಾನು ಲೈಟ್ ಬಾಯ್ನಿಂದ ಹಿಡಿದು ಇಲ್ಲಿಯವರೆಗೆ ಸ್ಯಾಂಡಲ್ವುಡ್ನಲ್ಲಿ ಇದುವರೆಗೆ ನೋಡಿಯೇ ಇಲ್ಲ. 27 ವರ್ಷದಲ್ಲಿ ಇಂಥದ್ದನ್ನು ನೋಡಿಯೇ ಇರಲಿಲ್ಲ. ನನಗೆ ಈ ರೀತಿಯ ಅನುಭವ ಆಗಿಲ್ಲ ಎಂದರು.
ಡ್ರಗ್ಸ್ ವಿಚಾರದಲ್ಲಿ ದಿವಂಗತ ಚಿರಂಜೀವಿ ಸರ್ಜಾ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ದರ್ಶನ್, ಸತ್ತು ಹೋದವರ ಬಗ್ಗೆ ಏನನ್ನೂ ಮಾತನಾಡಬಾರದು. ಸ್ಯಾಂಡಲ್ವುಡ್ನಲ್ಲಿ ಅಷ್ಟೇ ಅಲ್ಲ. ಎಲ್ಲೆಡೆಯಲ್ಲಿಯೂ ಇದೆ. ಚಿರು ಹೆಸರು ಕೇಳಿ ಬಂದಿದ್ದು ತುಂಬಾ ನೋವಾಗಿದೆ. ತಪ್ಪು ಮಾಡಿದ್ದರೆ ಕರೆದುಕೊಂಡು ಶಿಕ್ಷೆ ಕೊಡೊಕ್ಕಾಗುತ್ತಾ? ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಒಳ್ಳೆಯ ಮಾತಗಳನ್ನಾಡಬೇಕು ಎಂದರು.