ಕರ್ನಾಟಕ

karnataka

ETV Bharat / state

ಶಾಸಕರ ಹೆಸರು ಹೇಳಿ ಬೆದರಿಕೆ: ಮರಳು ಸಾಗಾಟಗಾರರಿಂದ ವ್ಯಕ್ತಿಗೆ ತರಾಟೆ - Harihara Congress MLA S. Ramappa

ತುಂಗಭದ್ರ ನದಿಯಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಜನರಿಗೆ ಶ್ರೀಕಾಂತ ಎಂಬಾತ ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಮರಳು ಸಾಗಾಟ ನಿಲ್ಲಿಸಲು ಹೇಳಿದ್ದಾರೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Davangere
ಮರಳು ಸಾಗಾಟಗಾರರಿಂದ ವ್ಯಕ್ತಿಗೆ ತರಾಟೆ

By

Published : Feb 11, 2021, 7:57 PM IST

ದಾವಣಗೆರೆ:ಎಂಎಲ್ಎ ಹೆಸರು ಹೇಳಿಕೊಂಡು ಬೆದರಿಕೆ ಹಾಕಲು ಬಂದವನಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ.

ಪರವಾನಗಿ ಪಡೆದು ತುಂಗಭದ್ರ ನದಿಯಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಜನರಿಗೆ ಶ್ರೀಕಾಂತ ಎಂಬಾತ ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಮರಳು ಸಾಗಾಟ ನಿಲ್ಲಿಸಲು ಹೇಳಿದ್ದಾರೆ ಎಂದು ಬೆದರಿಕೆ ಹಾಕುತ್ತಿದ್ದನಂತೆ. ಇದರಿಂದ ಕೋಪಗೊಂಡ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮರಳು ಸಾಗಾಟಗಾರರಿಂದ ವ್ಯಕ್ತಿಗೆ ತರಾಟೆ

ಶಾಸಕ ರಾಮಪ್ಪ ಅವರು ಹೇಳಿದ್ದಾರೆ ಮರಳು ಸಾಗಾಟ ನಿಲ್ಲಿಸಿ ಅಂತ ಅವಾಜ್ ಹಾಕಿದ್ದ ಶ್ರೀಕಾಂತ್​ನ ವಿರುದ್ಧ ಗ್ರಾಮಸ್ಥರು ಹಫ್ತಾ ವಸೂಲಿ ಮಾಡಲು ಬಂದಿದ್ದೀಯ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ABOUT THE AUTHOR

...view details