ದಾವಣಗೆರೆ:ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವ ವೇಳೆ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ಗುತ್ತಿಗೆದಾರನಿಗೆ ವಂಚಕರು ಬರೋಬ್ಬರಿ 60 ಲಕ್ಷ ರೂ. ವಂಚನೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿಯಲ್ಲಿ ಕಳೆದ ತಿಂಗಳಲ್ಲಿ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಮೂಲದ ಗುತ್ತಿಗೆದಾರ ಗೋವರ್ಧನ್ ವಂಚನೆ ಒಳಗಾದವರು.
ಮನೆ ನಿರ್ಮಾಣ ಮಾಡುವ ವೇಳೆ ಪಾಯಾ ತೆಗೆಯುವ ಸಂದರ್ಭದಲ್ಲಿ ಚಿನ್ನದ ಬಿಲ್ಲೆಗಳು (ನಾಣ್ಯಗಳು) ಪತ್ತೆಯಾಗಿವೆ ಎಂದು ಕುಮಾರ್ ಹಾಗೂ ಮುದಕಪ್ಪ ಎಂಬುವರು ಗುತ್ತಿಗೆದಾರ ಗೋವರ್ಧನ್ ಅವರನ್ನು ನಂಬಿಸಿದ್ದರು. ಖದೀಮರ ಮಾತುಗಳಿಗೆ ಮರುಳಾದ ಗುತ್ತಿಗೆದಾರರು ಸೆ.23ರಂದು 2.5 ಕೆಜಿ ನಕಲಿ ಚಿನ್ನದ ಬಿಲ್ಲೆಗಳನ್ನು ಪಡೆದು 60 ಲಕ್ಷ ನೀಡಿದ್ದಾರೆ. ನಕಲಿ ಚಿನ್ನದ ಪಡೆದ ಗೋವರ್ಧನ್ ಅವರು ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ ಚಿನ್ನ ಎಂಬ ಎಂಬ ವಿಚಾರ ಬಯಲಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುತ್ತಿಗೆದಾರ ಗೋವರ್ಧನ್ ಅವರು ವಿವಿಧ ಕಾಮಗಾರಿ ಮಾಡುವ ವೇಳೆ ಕುಮಾರ್ ಹಾಗೂ ಮುದುಕಪ್ಪ ಎಂಬುವರು ಅವರನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಸುಳ್ಳು ಹೇಳಿ ನಕಲಿ ಚಿನ್ನ ನೀಡಿ, ಗುತ್ತಿಗೆದಾರನಿಂದ 60 ರೂ ಪಡೆದಿದ್ದರು. ಚಿನ್ನದ ಅಂಗಡಯಲ್ಲಿ ಪರಿಶೀಲಿಸಿದ ಬಳಿಕ ವಂಚನೆ ಅರಿತು ಗುತ್ತಿಗೆದಾರ ಗೋರ್ವಧನ್ ಅವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.