ಕರ್ನಾಟಕ

karnataka

ETV Bharat / state

ಬ್ಯಾಂಕ್​ನಲ್ಲಿ ಇಟ್ಟಿದ್ದ ಹಣ ಎಸ್ಕೇಪ್ : ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕೈ ಚಳಕ - Uco bank davanagere

ಬ್ಯಾಂಕಿನ ವಹಿವಾಟಿಗಾಗಿ ಭದ್ರತಾ ಕೊಠಡಿಯಿಂದ ಹಣ ತಂದು ಇಟ್ಟಿದ ಯುಕೋ ಬ್ಯಾಂಕ್ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 10.15 ಲಕ್ಷ ರೂಪಾಯಿ ಹಣ ವಿದ್ದ ಸೂಟ್ ಕೇಸ್ ಕದ್ದೋಯ್ದ ಕಳ್ಳರ ಚಾಲಾಕಿತನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕೈ ಚಳಕ

By

Published : Aug 17, 2019, 1:11 PM IST

ದಾವಣಗೆರೆ : ನಗರದ ಬಿನ್ನಿಕಂಪನಿ ರಸ್ತೆಯಲ್ಲಿರುವ ಯುಕೋ ಬ್ಯಾಂಕಿನ ಲ್ಲಿ10 ಲಕ್ಷವಿದ್ದ ಸೂಟ್ ಕೇಸ್ ಕಳವು ಮಾಡಲಾಗಿದ್ದು, ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬ್ಯಾಂಕಿನ ವಹಿವಾಟಿಗೆ ಭದ್ರತಾ ಕೊಠಡಿಯಿಂದ ಹಣ ತಂದಿದ್ದ ಸೂಟ್ ಕೇಸ್ ಇಡಲಾಗಿತ್ತು. ಬ್ಯಾಂಕ್ ನ ಮ್ಯಾನೇಜರ್ ಭಕ್ತಿ ಭೂಷಣ್ ಗರನಾಯಕ್ ಸಿಬ್ಬಂದಿಗೆ ಹಣ ತರುವಂತೆ ಹೇಳಿದರು. ಆಗ ಸಿಬ್ಬಂದಿ ಭದ್ರತಾ ಕೊಠಡಿಯಿಂದ 10.15 ಲಕ್ಷ ರೂಪಾಯಿ ಹಣವಿದ್ದ ಸೂಟ್ ಕೇಸ್ ಕ್ಯಾಷಿಯರ್ ಗೆ ನೀಡಿದ್ದರು. ಆದ್ರೆ, ಸ್ವಲ್ಪ ಹೊತ್ತಿನ ಬಳಿಕ ಸೂಟ್ ಕೇಸ್ ಇಟ್ಟಿದ್ದ ಸ್ಥಳದಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಯುಕೋ ಬ್ಯಾಂಕಿನ ಲ್ಲಿ10 ಲಕ್ಷವಿದ್ದ ಸೂಟ್ ಕೇಸ್ ಕಳವು

ಐದಾರು ಮಂದಿ ಕ್ಯಾಷಿಯರ್ ಗಮನ ಬೇರೆಡೆಗೆ ಸೆಳೆದು ಸೂಟ್ ಕೇಸ್ ಒಯ್ಯುವ ದೃಶ್ಯ ಸೆರೆಯಾಗಿದ್ದು ಗೊತ್ತಾಯಿತು. ಬ್ಯಾಂಕ್ ಮ್ಯಾನೇಜರ್ ಬಸವನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details