ಕರ್ನಾಟಕ

karnataka

ETV Bharat / state

ದಾವಣಗೆರೆ: ವ್ಯಕ್ತಿಯ ಗಮನ ಬೇರೆಡೆ ಸೆಳೆದು 4.85 ಲಕ್ಷ ರೂ. ಎಗರಿಸಿದ ಖದೀಮರು - ದಾವಣಗೆರೆ ಕಳ್ಳತನ ಸುದ್ದಿ

ವ್ಯಕ್ತಿಯ ಗಮನ ಬೇರೆಡೆಗೆ ಸೆಳೆದು ಲಕ್ಷಾಂತರ ರೂ. ಎಗರಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

davangere
ದಾವಣಗೆರೆ ಕಳ್ಳತನ

By

Published : Jan 28, 2021, 7:11 AM IST

ದಾವಣಗೆರೆ:ವ್ಯಕ್ತಿಯಗಮನ ಬೇರೆಡೆಗೆ ಸೆಳೆದು 4.85 ಲಕ್ಷ ರೂ. ಲಪಟಾಯಿಸಿರುವ ಘಟನೆ ಹೊನ್ನಾಳಿ ‌ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗ ನಡೆದಿದೆ.

ಘಂಟ್ಯಾಪುರದ ಚಂದ್ರನಾಯ್ಕ್ ಹಣ ಕಳೆದುಕೊಂಡ ವ್ಯಕ್ತಿ. ಮೆಕ್ಕೆಜೋಳದ ವ್ಯಾಪಾರಿಯಾಗಿದ್ದ ಚಂದ್ರನಾಯ್ಕ್, ಕೆನರಾ ಬ್ಯಾಂಕ್​ನಿಂದ‌ ಹಣ ಬಿಡಿಸಿಕೊಂಡು ಬೈಕ್‌ ಹತ್ತುವಾಗ ಚಾಲಾಕಿ ಕಳ್ಳರು ಹಣ ಲಪಟಾಯಿಸಿದ್ದಾರೆ.

ಬ್ಯಾಂಕಿನಿಂದ ಹಣ ಬಿಡಿಸಿಕೊಂಡ ಬಂದ ಚಂದ್ರನಾಯ್ಕನ ಬೈಕ್ ಮುಂಭಾಗ 500 ರೂ.ನ್ನು ಖದೀಮರು ಬಿಸಾಕಿದ್ದಾರೆ. ಈ ವೇಳೆ, ಅದನ್ನು ತೆಗೆದುಕೊಳ್ಳಲು ತೆರಳಿದಾಗ ಖದೀಮರು ಹಣವನ್ನು ಎಗರಿಸಿದ್ದಾರೆ.

ಹಣ ಕಳೆದುಕೊಂಡ ಚಂದ್ರನಾಯ್ಕ್ ದಿಕ್ಕು ತೋಚದೆ ಹೊನ್ನಾಳಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details