ಕರ್ನಾಟಕ

karnataka

ETV Bharat / state

ಹಿಜಾಬ್‌ ಗಲಾಟೆ: ದಾವಣಗೆರೆ ಜಿಲ್ಲಾದ್ಯಂತ 20 ಪ್ರಕರಣ ದಾಖಲು, 30 ಜನರ ಬಂಧನ

ಕೇಸರಿ ಶಾಲು ಹಾಗೂ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾದ್ಯಂತ 20 ಪ್ರಕರಣ ದಾಖಲಾಗಿದ್ದು, 30 ಜನರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಸಿ.ಬಿ.ರಿಷ್ಯಂತ್ ತಿಳಿಸಿದರು.

sp  c.b. risyanth
ಎಸ್​ಪಿ ಸಿ.ಬಿ. ರಿಷ್ಯಂತ್

By

Published : Feb 13, 2022, 12:55 PM IST

ದಾವಣಗೆರೆ: ಕೇಸರಿ ಶಾಲು ಹಾಗೂ ಹಿಜಾಬ್ ಹಿನ್ನೆಲೆಯಲ್ಲಿ ನಡೆದಿರುವ ಗಲಾಟೆಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯಲ್ಲಿ 20 ಪ್ರಕರಣ ದಾಖಲಾಗಿದ್ದು, 30 ಜನರನ್ನು ಬಂಧಿಸಲಾಗಿದೆ. ಅವಹೇಳನಕಾರಿ ಪೋಸ್ಟ್, ಹಲ್ಲೆ, ಗಲಭೆ ಸಂಬಂಧ ಈ ಪ್ರಕರಣಗಳು ದಾಖಲಾಗಿದೆ.


ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರ ಕಟ್ಟೆಚ್ಚರ ವಹಿಸಿದ್ದಾರೆ. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಯಾವ ಸಂಘಟನೆಗಳೂ ಜಿಲ್ಲೆಗೆ ಬಂದಿಲ್ಲ. ಒಂದು ವೇಳೆ ಬಂದರೆ ಅಂಥವರ ಮೇಲೆ ಕಣ್ಣಿಡುವಂತೆ ಪೊಲೀಸರಿಗೆ ಎಸ್​ಪಿ ರಿಷ್ಯಂತ್ ಸೂಚನೆ ನೀಡಿದ್ದಾರೆ.

ಹರಿಹರ, ಮಲೇಬೆನ್ನೂರು, ನಲ್ಲೂರು ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಗಲಾಟೆ ನಡೆದಿತ್ತು. ವಾಟ್ಸಪ್ ಸ್ಟೇಟಸ್ ಕುರಿತು ಕೂಡ ಗಲಾಟೆ ನಡೆದಿದೆ. ಈ ಗಲಾಟೆಗಳಲ್ಲಿ ಯಾವುದೇ ಸಂಘಟನೆಗಳ ಕೈವಾಡ ಇಲ್ಲ. ಸೋಮವಾರದಿಂದ ಭಯವಿಲ್ಲದೆ ಶಾಲೆಗೆ ತೆರಳಬಹುದಾಗಿದೆ ಎಂದು ಎಸ್​ಪಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ: ಬೊಮ್ಮಾಯಿ

ABOUT THE AUTHOR

...view details