ದಾವಣಗೆರೆ :ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಆರ್ಎಸ್ಎಸ್ ಗಂಧ ಗಾಳಿಯೂ ಗೊತ್ತಿಲ್ಲ. ಯಾವುದೋ ಒಂದು ಪುಸ್ತಕ ಓದಿಕೊಂಡು ಅದೇ ಸತ್ಯ ಅಂದುಕೊಂಡರೆ ಹೇಗೆ? ಎಂದು ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಕಂದಾಯ ಸಚಿವ ಆರ್.ಆಶೋಕ್ ವಾಗ್ದಾಳಿ ನಡೆಸಿದರು.
ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಕುರುಡ. ಆನೆಯ ಬಾಲ ಮುಟ್ಟಿ ಅದೇ ಆನೆ ಎಂದು ಕೊಂಡಿದ್ದಾರೆ. ಈಗ ಕಾಂಗ್ರೆಸ್-ಜೆಡಿಎಸ್ ನಡುವೆ ಅಲ್ಪಸಂಖ್ಯಾತರ ಮತಗಳಿಗೆ ಪೈಪೋಟಿ ಶುರುವಾಗಿದೆ.
ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಕಚ್ಚಾಟ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಕಚ್ಚಾಟವಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.