ದಾವಣಗೆರೆ: ಕೊರೊನಾ ವೈರೆಸ್ ಸೋಂಕು ಹರಡದಂತೆ ತಡೆಯಲು ಲಾಕ್‍ಡೌನ್ ಜಾರಿಯಲ್ಲಿದ್ದು, ರಂಜಾನ್ ತಿಂಗಳಿನ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಒಳಗೊಂಡಂತೆ ದೈನಂದಿನ ಸಾಮೂಹಿಕ ಪ್ರಾರ್ಥನೆಯ ಜೊತೆಗೆ ನಮಾಜ್‍ನ್ನು ಮಸೀದಿಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ. ಮನೆಯಲ್ಲೇ ಎಲ್ಲಾ ರೀತಿಯ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಪ್ರವಾದಿ ಮಹಮ್ಮದ್ ಪೈಗಂಬರರು ಯಾವುದೇ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ, ಪ್ರತಿಯೊಬ್ಬರೂ ಯಾವುದೇ ಪ್ರದೇಶಗಳಿಗೆ ತೆರಳದೇ ಮನೆಯಲ್ಲಿಯೇ ಮಾಡುವ ಕುರಿತು ಉಪದೇಶಿಸಿರುವುದರಿಂದ ಮನೆಯಲ್ಲಿಯೇ ಇದ್ದುಕೊಂಡು ಉಪವಾಸ ಆಚರಣೆ ಮಾಡಬೇಕು. ಇದೇ ತಿಂಗಳ ಅಂತಿಮ ಘಟ್ಟದಲ್ಲಿ ಶಬ್-ಎ-ಖದ್ರ್ ಪವಿತ್ರ ಶುಭರಾತ್ರಿಯಲ್ಲಿ ಸಕಲ ಮಾನವ ಕುಲದ ಒಳಿತಿಗಾಗಿ ಹಾಗೂ ಕೋವಿಡ್-19 ಸೋಂಕಿನ ನಿವಾರಣೆಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸುವಂತೆ ಕರೆ ನೀಡಲಾಗಿದೆ.