ಹರಿಹರ(ದಾವಣಗೆರೆ):ಸರ್ಕಾರಿ ನೌಕರರ ಡಿ.ಎ ಮತ್ತು ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದು ಮಾಡುವ ಯೋಜನೆಯಿಂದ ಆರೋಗ್ಯ ಇಲಾಖೆ ನೌಕರರಿಗೆ ವಿನಾಯ್ತಿ ನೀಡಲು ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದಿಂದ ಡಿಸಿ, ಸಿಇಒ, ಡಿಹೆಚ್‌ಒ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಗಳಿಕೆ ರಜೆ ನಗದೀಕರಣ ರದ್ದು ಯೋಜನೆಯಿಂದ ಆರೋಗ್ಯ ಇಲಾಖೆಗೆ ವಿನಾಯ್ತಿ ನೀಡುವಂತೆ ಮನವಿ - Davanagere News
ಆರೋಗ್ಯ ಇಲಾಖೆ ನೌಕರರಿಗೆ ಡಿ.ಎ ಮತ್ತು ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದು ಮಾಡುವ ಯೋಜನೆಯಿಂದ ವಿನಾಯ್ತಿ ನೀಡಲು ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದಿಂದ ಡಿಸಿ, ಸಿಇಒ, ಡಿಹೆಚ್‌ಒ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
![ಗಳಿಕೆ ರಜೆ ನಗದೀಕರಣ ರದ್ದು ಯೋಜನೆಯಿಂದ ಆರೋಗ್ಯ ಇಲಾಖೆಗೆ ವಿನಾಯ್ತಿ ನೀಡುವಂತೆ ಮನವಿ Request to exempt the Department of Health from Leave Cancellation Scheme](https://etvbharatimages.akamaized.net/etvbharat/prod-images/768-512-7203386-291-7203386-1589522129237.jpg)
ಗಳಿಕೆ ರಜೆ ನಗದೀಕರಣ ರದ್ದು ಯೋಜನೆಯಿಂದ ಆರೋಗ್ಯ ಇಲಾಖೆಗೆ ವಿನಾಯ್ತಿ ನೀಡುವಂತೆ ಮನವಿ
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ವಿ. ಹೊರಕೇರಿ, ಸರ್ಕಾರ ಕೋವಿಡ್-19 ಸಂಬಂಧ ಸರ್ಕಾರಿ ನೌಕರರಿಗೆ 2021 ರವರೆಗೆ ಡಿಎ ಮತ್ತು ಗಳಿಕೆ ರಜೆ ನದಗೀಕರಣ ರದ್ದು ಮಾಡಿದೆ. ಆದರೆ, ಆರೋಗ್ಯ ಇಲಾಖೆ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು 2 ತಿಂಗಳಿಂದ ಒಂದೂ ರಜೆ ತೆಗೆದುಕೊಳ್ಳದೆ, ಹಗಲು-ರಾತ್ರಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ, ಡಿಎ ಮತ್ತು ಗಳಿಕೆ ರಜೆ ನದಗೀಕರಣ ರದ್ದು ಯೋಜನೆಯಿಂದ ಆರೋಗ್ಯ ಇಲಾಖೆಗೆ ವಿನಾಯ್ತಿ ನೀಡಬೇಕು ಎಂದು ಮನವಿ ಮಾಡಿದರು.