ಹರಿಹರ: ತಾಲೂಕಿನ ಬೆಳ್ಳೂಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಎಕ್ಕೆಗೊಂದಿ ಗ್ರಾಮದ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ದರವನ್ನು ಈ ಹಿಂದಿನಂತೆ ನಿಗದಿಪಡಿಸಬೇಕು ಇಲ್ಲವಾದರೆ ಗ್ರಾಮ ಪಂಚಾಯತ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಗ್ರಾ.ಪಂ ಮಾಜಿ ಸದಸ್ಯ ಎಕ್ಕೆಗೊಂದಿ ರುದ್ರೇಗೌಡ ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ನೀರಿನ ದರ ಇಳಿಸದಿದ್ದರೆ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ: ಎಕ್ಕೆಗೊಂದಿ ಗ್ರಾಮಸ್ಥರ ಎಚ್ಚರಿಕೆ - request of the villagers to reduce the water price
ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ದರವನ್ನು ಈ ಹಿಂದಿನಂತೆ ನಿಗದಿಪಡಿಸಬೇಕು. ಇಲ್ಲವಾದರೆ ಗ್ರಾಮ ಪಂಚಾಯತ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಕ್ಕೆಗೊಂದಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
![ನೀರಿನ ದರ ಇಳಿಸದಿದ್ದರೆ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ: ಎಕ್ಕೆಗೊಂದಿ ಗ್ರಾಮಸ್ಥರ ಎಚ್ಚರಿಕೆ request of the villagers to reduce the water price](https://etvbharatimages.akamaized.net/etvbharat/prod-images/768-512-5819416-thumbnail-3x2-hrs.jpg)
ಗ್ರಾಮಸ್ಥರೊಂದಿಗೆ ನಗರದ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಕೆ.ಬಿ ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಮ್ಮ ಗ್ರಾಮದ ನೂರಾರು ಬಡ ಕುಟುಂಬಗಳು ಕೇವಲ ಎರಡು ರೂಪಾಯಿಗೆ ಇಪ್ಪತ್ತು ಲೀಟರ್ ಸರ್ಕಾರದ ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿತ್ತು. ಆದರೆ ಏಕಾಏಕಿ ನೀರಿನ ದರವನ್ನು ಎರಡರಿಂದ ಐದು ರೂಪಾಯಿಗೆ ಏರಿಸಿರುವುದು ಬಡ ಜನರಿಗೆ ಹೊರೆಯಾಗಿದೆ. ಸರ್ಕಾರ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರನ್ನು ನೀಡುತ್ತಿರುವಾಗ ಬಡ ಜನರ ಆರೋಗ್ಯ ಉತ್ತಮವಾಗಿತ್ತು. ಆದರೆ ಬೆಲೆ ಏರಿಕೆಯಿಂದ ಜನರು ಶುದ್ಧ ನೀರನ್ನು ಕುಡಿಯುವ ಬದಲು, ಹೆಚ್ಚಿನ ಪ್ಲೋರೈಡ್ ಇರುವ ಕೊಳವೆ ಬಾವಿಯ ನೀರು ಕುಡಿಯುತ್ತಿರುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಗುತ್ತಿಗೆ ಆಧಾರದಲ್ಲಿ ನೀಡಿರುವ ಶುದ್ಧ ನೀರಿನ ಘಟಕದ ನಿರ್ವಹಣೆಯನ್ನು ಮೊದಲಿನಂತೆ ಗ್ರಾಮ ಪಂಚಾಯತ್ ನೀಡಬೇಕು. ಇಲ್ಲವೇ ಇದೇ ಗುತ್ತಿಗೆದಾರನಿಂದ ಎರಡು ರೂಪಾಯಿಗೆ ಇಪ್ಪತ್ತು ಲೀಟರ್ ನೀರು ಸಿಗುವಂತಾಗಬೇಕು. ಇಲ್ಲವಾದರೆ ಬೆಳ್ಳೂಡಿ ಗ್ರಾ.ಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಚಂದ್ರಪ್ಪ, ಎ, ಗುರುರಾಜ್, ಬಸವರಾಜ್, ಸನಾಉಲ್ಲಾ, ಬೀರೇಶ್, ಮಲ್ಲನಗೌಡ, ಕೆ.ಎನ್ ಕೊಟ್ರಪ್ಪ, ಗುಡ್ಡಪ್ಪ, ಪರಮೇಶ್ವರಪ್ಪ, ಹನುಮಂತಪ್ಪ. ಬಸವರಾಜ್, ರಂಗಪ್ಪ ಹಾಗೂ ಮತ್ತಿತರರಿದ್ದರು.