ದಾವಣಗೆರೆ: ಜಿಲ್ಲೆಯಲ್ಲಿ 298 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿದೆ. ದಾವಣಗೆರೆ 132, ಹರಿಹರ 67, ಜಗಳೂರು 16, ಚನ್ನಗಿರಿ 38, ಹೊನ್ನಾಳಿ 43 ಹಾಗೂ ಹೊರ ಜಿಲ್ಲೆಯಿಂದ ಇಬ್ಬರಲ್ಲಿ ಸೋಂಕಿರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ 20,234ಕ್ಕೆ ಸೋಂಕಿತರ ಸಂಖ್ಯೆ ಏರಿದೆ.
20 ಸಾವಿರ ದಾಟಿದ ಸೋಂಕಿತರ ಸಂಖ್ಯೆ.. ಇಂದು 298 ಕೊರೊನಾ ಪಾಸಿಟಿವ್ - ದಾವಣಗೆರೆ ಜಿಲ್ಲೆ ಸುದ್ದಿ
ದಾವಣಗೆರೆ ಜಿಲ್ಲೆಯ ಕೊರೊನಾ ಪ್ರಕರಣಗಳ ವರದಿ ಇಲ್ಲಿದೆ.
ದಾವಣಗೆರೆ ಜಿಲ್ಲೆಯ ಕೊರೊನಾ ಪ್ರಕರಣಗಳ ವರದಿ
129 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದು, ಇದುವರೆಗೆ 18,849 ಜನರು ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 1132 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ. 841 ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 7609 ಸ್ವ್ಯಾಬ್ ಗಳ ರಿಪೋರ್ಟ್ ಬರಬೇಕಿದೆ.