ದಾವಣಗೆರೆ:ರಾಜಕೀಯವಾಗಿ ಬೆಳೆಯುತ್ತಿದ್ದ ಚಂದ್ರು ಸಾವಿಗೀಡಾಗಿರುವ ದುರಂತ ಕೇಳಿ ಬಹಳ ದು:ಖವಾಯಿತು ಎಂದು ಸಂಸದ ಬಿವೈ ರಾಘವೇಂದ್ರ ಕಳವಳ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಾಸಕ ಎಂ.ಪಿ. ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ ಅವರು, ನದಿಯಲ್ಲಿ ಮುಳುಗಿ ಮೃತ ಚಂದ್ರಶೇಖರ್ ಪಾರ್ಥಿವ ಶರೀರದ ದರ್ಶನ ಪಡೆಯುವ ವೇಳೆ ಮಾತನಾಡಿದರು.
ಒಳ್ಳೆಯವನಾಗಿದ್ದ ಚಂದ್ರು:ಚಂದ್ರು ಬಹಳ ಒಳ್ಳೆಯ ಹುಡುಗ, ಕಳೆದ ಐದಾರು ದಿನಗಳಿಂದ ನಾಪತ್ತೆಯಾಗಿದ್ದ, ಇದೀಗ ಅವನು ಸಾವಿಗೀಡಾಗಿರುವ ದಾರುಣ ಸುದ್ದಿ ಕೇಳಿ ಬೇಸರ ಆಗಿದೆ. ಚಂದ್ರು ರಾಜಕೀಯವಾಗಿ ಕಾರ್ಯಕರ್ತರು ಮಧ್ಯೆ ಒಳ್ಳೆ ಒಡನಾಟ ಇಟ್ಟುಕೊಂಡಿದ್ದರು. ಆದರೆ, ಈ ರೀತಿ ಸಾವಿಗೀಡಾಗಿದ್ದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದ್ದು, ಸಾಕಷ್ಟು ಬೇಸರ ತರುತ್ತೇ, ತನಿಖೆ ನಡೆಸಲು ಪೊಲೀಸರಿದ್ದಾರೆ ಕಾದು ನೋಡೋಣ ಎಂದರು.