ಕರ್ನಾಟಕ

karnataka

ETV Bharat / state

ಸಂದಿಗ್ಧ ಪರಿಸ್ಥಿತಿಯಲ್ಲಿ ಜನರೊಂದಿಗೆ ನಿಂತ ಶಾಸಕ.. ದೇಶಾದ್ಯಂತ ರೇಣುಕಾಚಾರ್ಯರ ಸೇವೆಗೆ ಸಲಾಂ ಎಂದ ಜನ - mla renukacharya work for patients in davanagere

ಬಿಜೆಪಿಯಲ್ಲೀಗ ಸಿಎಂ ಬದಲಾವಣೆ, ಯಡಿಯೂರಪ್ಪ ರಾಜೀನಾಮೆಗೆ ಸಿದ್ಧ ಎಂಬ ರಾಜಕೀಯದ ಸುದ್ದಿಗಳು ಹೊರಬರುತ್ತಿವೆ. ಆದ್ರೆ ಅದೇ ಪಕ್ಷದ ಹೊನ್ನಾಳಿ ಶಾಸಕ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸದಾ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಈ ನಡೆ ಕ್ಷೇತ್ರದ ಜನರಿಗಷ್ಟೇ ಅಲ್ಲದೆ ರಾಜ್ಯ ಮತ್ತು ದೇಶದಲ್ಲೂ ಗಮನ ಸೆಳೆದಿದ್ದಾರೆ.

renukacharya-work-for-corona-patients-in-davanagere
ಕೊರೊನಾ ರೋಗಿಗಳ ಜೊತೆ ರೇಣುಕಾಚಾರ್ಯ

By

Published : Jun 6, 2021, 8:18 PM IST

Updated : Jun 6, 2021, 8:58 PM IST

ದಾವಣಗೆರೆ: ಕೊರೊನಾ 2ನೇ ಅಲೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯ ಸದ್ದಿಲ್ಲದೆ ಜನರ ಸೇವೆ ಮಾಡುತ್ತಿದ್ದಾರೆ. ಕೆಲ ಶಾಸಕರಂತೆ ಮನೆಯಲ್ಲೇ ಕಾಲ ಕಳೆಯದೆ ಇಡೀ ದೇಶವೇ ಹಿಂದಿರುಗಿ ನೋಡುವಂತೆ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಸೋಂಕಿತರಿಗೆ ಧೈರ್ಯ ತುಂಬುತ್ತಿದ್ದಾರೆ.

ರೇಣುಕಾಚಾರ್ಯರ ಸೇವೆ ಕುರಿತು ಸಿರಿಯಲ್​ ನಟ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಇದೀಗ ಇಡೀ ರಾಜ್ಯ, ದೇಶದಲ್ಲಿ ತಮ್ಮ ಸೇವೆಯ ಮೂಲಕ ಸುದ್ದಿಯಲ್ಲಿದ್ದಾರೆ. ಸದ್ದಿಲ್ಲದೆ ಸೋಂಕಿತರ ಸೇವೆಯನ್ನು ಮಾಡುತ್ತಾ, ಇಡೀ ದೇಶವೇ ಹಿಂದಿರುಗಿ ನೋಡುವಂತೆ ಮಾಡಿದ್ದಾರೆ.

ಆ್ಯಂಬುಲೆನ್ಸ್​ ಚಾಲನೆಯಲ್ಲಿ ಶಾಸಕ

ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ: ಕೊರೊನಾ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ತಮ್ಮ ಕ್ಷೇತ್ರದ ಜನರ ರಕ್ಷಣೆಗೆ ನಿಂತಿದ್ದು, ಮತದಾರರ ಋಣವನ್ನು ತೀರಿಸುತ್ತಿದ್ದಾರೆ. ಸೋಂಕಿತರಿಗೆ ಅವಶ್ಯಕತೆ ಇರುವ ಆಕ್ಸಿಜನ್​, ಬೆಡ್​ಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಇದಲ್ಲದೆ ಕೋವಿಡ್ ವಾರ್ಡ್​ಗೆ ತೆರಳಿ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಕೊರೊನಾದಿಂದ ಮೃತಪಟ್ಟ ಸಂಬಂಧಿಕರಿಗೆ ಶಾಸಕ ರೇಣುಕಾಚಾರ್ಯ ಸಾಂತ್ವನ

ರಸಮಂಜರಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ಸ್​:ಸೋಂಕಿತರ ಭಯವನ್ನು ದೂರ ಮಾಡಲು ರಸಮಂಜರಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿ ರಂಜಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಆ್ಯಂಬುಲೆನ್ಸ್ ಹಾಗು ಸೋಂಕಿತರಿಗೆ ರುಚಿಯಾದ ಊಟವನ್ನು ತಯಾರಿಸಿ ತಾವೇ ಬಡಿಸುತ್ತಾ ಪ್ರತಿಯೊಬ್ಬರಿಗೂ ವ್ಯಾಕ್ಸಿನ್​ ಹಾಕಿಸುವ ಪ್ರಯತ್ನದಲ್ಲಿದ್ದಾರೆ.

ಆಹಾರದ ಗುಣಮಟ್ಟ ಪರಿಶೀಲಿಸಿದ ಏಕೈಕ ಶಾಸಕ: ಅಲ್ಲದೇ, ಮೂರು ದಿನಗಳ ಕಾಲ ಕೋವಿಡ್ ಕೇರ್ ಸೆಂಟರ್​ನಲ್ಲಿ ವಾಸ್ತವ್ಯ ಹೂಡಿ ಆಹಾರದ ಗುಣಮಟ್ಟ ಪರಿಶೀಲಿಸಿದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಕೆಲವೊಮ್ಮೆ ಆ್ಯಂಬುಲೆನ್ಸ್​ ಚಾಲಕರಾಗಿ ಮೃತ ಸೋಂಕಿತರ ದೇಹ ಹೊತ್ತು ಶವಸಂಸ್ಕಾರದಲ್ಲಿ ಭಾಗಿಯಾಗಿ ಸಂಬಂಧಿಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಕೋವಿಡ್​ ಕೇರ್​ ಸೆಂಟರ್​ನಲ್ಲಿ ತಂಗಿದ ಶಾಸಕ ರೇಣುಕಾಚಾರ್ಯ

ದಿನನಿತ್ಯ ಯೋಗಾಸನ: ತಮ್ಮ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತಿರುವ ಶಾಸಕ ರೇಣುಕಾಚಾರ್ಯ ಚಪಾತಿ ಉಜ್ಜಿ ಸೋಂಕಿತರಿಗೆ ನೀಡಿದ್ದು ಕೂಡ ವಿಶೇಷ. ಇದಲ್ಲದೆ ಸೋಂಕಿತರು ಆರೋಗ್ಯವಾಗಿರಬೇಕೆಂದು ಸಿಸಿಸಿಗಳಲ್ಲಿ ದಿನನಿತ್ಯ ಯೋಗಾಸನ ಮಾಡಿಸಿರುವುದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು.

ಕೊರೊನಾ ರೋಗಿಗಳಿಗೆ ಯೋಗಾಸನ ತರಭೇತಿ ನೀಡಿದ ಶಾಸಕ

ಶಾಸಕರ ಸೇವೆ ನೋಡಿ ಸಲಾಂ ಹೇಳಿದ ಹಿಂದಿ ಕಿರುತೆರೆ ನಟ: ಶಾಸಕ ಎಂ.ಪಿ. ರೇಣುಕಾಚಾರ್ಯರ ಅವರ ಈ ಸೇವೆಯನ್ನು ನೋಡಿರುವ ಹಿಂದಿ ಧಾರಾವಾಹಿ ನಟ ರೂಶಾದ್​ ರಾಣಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಜನಪ್ರತಿನಿಧಿಗಳಿಗೆ ಮಾದರಿ ಎಂದು ಹಾಡಿ ಹೊಗಳಿದ್ದಾರೆ.

ಒಟ್ಟಾರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸಂಚರಿಸುತ್ತಿದ್ದು, ಅವರ ಈ ಕಾರ್ಯಕ್ಕೆ ರಾಷ್ಟ್ರೀಯ ಬಿಜೆಪಿ ನಾಯಕರು ಶಹಭಾಶ್ಗಿರಿ ನೀಡಿದ್ದಾರೆ.

ಚಪಾತಿ ತಯಾರಿಕೆಯಲ್ಲಿ ನಿರತರಾದ ರೇಣುಕಾಚಾರ್ಯ

ಕೇವಲ ಚುನಾವಣೆ ಸಂದರ್ಭದಲ್ಲಿ ಜನರ ಮನೆಗಳಿಗೆ ತೆರಳಿ ಮತಭಿಕ್ಷೆ ಬೇಡುವ ರಾಜಕರಾಣಿಗಳ ಮಧ್ಯೆ ರೇಣುಕಾಚಾರ್ಯ ಅವರು ಸದಾ ಜನರೊಂದಿಗೆ ಒಡನಾಟು ಇಟ್ಟುಕೊಂಡು, ಅವರ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ.

ಓದಿ:ಕೊರೊನಾ ಭಯ: ಊರು ಬಿಟ್ಟು ಜಮೀನಿನ ಬಳಿ ಕುಟುಂಬವೊಂದರ ವಾಸ್ತವ್ಯ

Last Updated : Jun 6, 2021, 8:58 PM IST

ABOUT THE AUTHOR

...view details