ತಂದೆ-ಮಗಳಿಗೆ ಕೊರೊನಾ ಸೋಂಕು, ಸ್ಥಳಕ್ಕೆ ರೇಣುಕಾಚಾರ್ಯ ಭೇಟಿ - ಬಿದರಹಳ್ಳಿ ಗ್ರಾಮ ಸೀಲ್ಡೌನ್
ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು ಇದೀಗ ನ್ಯಾಮತಿ ತಾಲೂಕಿನಲ್ಲಿ ಮೂರು ಜನರಿಗೆ ಸೋಂಕು ಪತ್ತೆಯಾಗಿದೆ.
ರೇಣುಕಾಚಾರ್ಯ
ದಾವಣಗೆರೆ :ನ್ಯಾಮತಿ ತಾಲೂಕಿನಲ್ಲಿ ಮೂರು ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಎರಡು ಕಡೆ ಅಧಿಕಾರಿಗಳ ಜೊತೆ ಭೇಟಿ ನೀಡಿದ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಈ ಪ್ರದೇಶಗಳನ್ನು ಸೀಲ್ಡೌನ್ ಮಾಡಿಸಿದ್ದಾರೆ.
ಈ ಎರಡು ಗ್ರಾಮಗಳಿಗೆ ಭೇಟಿ ನೀಡಿದ ರೇಣುಕಾಚಾರ್ಯ, ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸೋಪಿನಿಂದ ಕೈ ತೊಳೆದುಕೊಳ್ಳಿ, ಸ್ಯಾನಿಟೈಸರ್ ಬಳಸಿ ಅನಾವಶ್ಯಕವಾಗಿ ಓಡಾಡಬೇಡಿ ಎಂದು ಮನವಿ ಮಾಡಿದರು.