ಕರ್ನಾಟಕ

karnataka

ETV Bharat / state

ಮದುವೆ ಸಮಾರಂಭದಲ್ಲಿದ್ದ ಶಾಸಕ ರೇಣುಕಾಚಾರ್ಯಗೆ ತೂರಿಬಂದ ಪ್ರಶ್ನೆ ಏನ್​ ಗೊತ್ತಾ? - latest renukacharya news

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಅರುಣ್ ಕುಮಾರ್ ಹಾಗೂ ವಿನುತಾರ ಸರಳ ವಿವಾಹ ನೆರವೇರಿತು. ನವಜೋಡಿಗೆ ಶಾಸಕ ರೇಣುಕಾಚಾರ್ಯ ಮಾಸ್ಕ್ ವಿತರಿಸಿ ಶುಭ ಹಾರೈಸಿದರು.‌

renukacharya
ರೇಣುಕಾಚಾರ್ಯಗೆ ಸ್ಥಳೀಯ ವ್ಯಕ್ತಿಯ ಪ್ರಶ್ನೆ

By

Published : May 18, 2020, 3:40 PM IST

ದಾವಣಗೆರೆ : "ನೀವ್ ಬರೀ ಫೇಸ್​ಬುಕ್ ಲೈವ್​ನಲ್ಲಿ ಬರ್ತೀರಾ, ನಮ್ಮೂರಿಗೆ ಬಂದೇ ಇಲ್ಲ' ಎಂದು ಮದುವೆಗೆ ಬಂದ ಶಾಸಕ ಎಂ. ಪಿ. ರೇಣುಕಾಚಾರ್ಯರನ್ನು ವ್ಯಕ್ತಿಯೊಬ್ಬರು ಪ್ರಶ್ನಿಸಿದ ಘಟನೆ ಹೊನ್ನಾಳಿ ತಾಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದಕ್ಕೆ ರೇಣುಕಾಚಾರ್ಯ ಕೂಡ ಏಯ್ ನಿಮ್ಮೂರಿಗೆ ಬಂದಿದ್ದೇನೆ. ಕೊರೊನಾ ಬಗ್ಗೆ ಮನೆ ಮನೆಗೆ ಬಂದು ಜಾಗೃತಿ ಮೂಡಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ರೇಣುಕಾಚಾರ್ಯಗೆ ಸ್ಥಳೀಯ ವ್ಯಕ್ತಿಯಿಂದ ತೂರಿಬಂತು ಪ್ರಶ್ನೆ

ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಎಲ್ಲರೂ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ಬೀಳುತ್ತೆ ಎಂದು ಶಾಸಕರು ಎಚ್ಚರಿಸಿದರು. ಇದಕ್ಕೆ ಕೊರೊನಾ ಬಂದ ಮೇಲೆ ಎಲ್ಲೂ ಹೋಗಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳುತ್ತಿದ್ದಂತೆ, ನಾನು ಊರಿನ ತುಂಬಾ ಓಡಾಡಿದ್ದೇನೆ, ಜಾಗೃತಿ ಮುಖ್ಯ,‌ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದರು.

ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಅರುಣ್ ಕುಮಾರ್ ಹಾಗೂ ವಿನುತಾರ ಸರಳ ವಿವಾಹ ನೆರವೇರಿತು. ನವಜೋಡಿಗೆ ರೇಣುಕಾಚಾರ್ಯ ಮಾಸ್ಕ್ ವಿತರಿಸಿ ಶುಭ ಹಾರೈಸಿದರು.‌

ABOUT THE AUTHOR

...view details