ಕರ್ನಾಟಕ

karnataka

ETV Bharat / state

ವಾಟಾಳ್ ನಾಗರಾಜ್ ನೀವೆಷ್ಟು ಆಸ್ತಿ ಮಾಡಿದ್ದೀರಾ ಎಂಬುದು ಗೊತ್ತಿಲ್ವಾ: ರೇಣುಕಾಚಾರ್ಯ ವಾಗ್ದಾಳಿ - Vatal nagaraj

ವಾಟಾಳ್ ಶಾಸಕರಾಗಿದ್ದಾಗ ಯಾವ್ಯಾಯ ಮುಖ್ಯಮಂತ್ರಿ ಬಳಿ ಏನೇನೂ ಕೆಲಸ ಮಾಡಿಸಿಕೊಂಡಿದ್ದಾರೆ ಎಂಬುದು ಗೊತ್ತಿದೆ. ಯಡಿಯೂರಪ್ಪರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಎಂ‌. ಪಿ. ರೇಣುಕಾಚಾರ್ಯ ವಾಟಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

renukacharya
ಎಂ‌. ಪಿ. ರೇಣುಕಾಚಾರ್ಯ

By

Published : Nov 24, 2020, 2:55 PM IST

ದಾವಣಗೆರೆ: ಮೊದಲು ಬೂಟಾಟಿಕೆ ಮಾತು ಬಿಡಿ. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸೈಟ್ ಮಾಡಿದ್ದೀರಾ ಎಂಬ ದಾಖಲೆ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂ‌. ಪಿ. ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ‌.

ಎಂ‌. ಪಿ. ರೇಣುಕಾಚಾರ್ಯ

ತಾಲೂಕಿನ ಅಪೂರ್ವ ರೆಸಾರ್ಟ್​ನಲ್ಲಿ‌ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಾಟಾಳ್​ ನಾಗರಾಜ್​ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಮೀನು ಒತ್ತುವರಿಯನ್ನು ಮಾಡಿದ್ದಾರೆ. ಅಲ್ಲದೇ ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಜಮೀನು ಮಾಡಿಲ್ವಾ, ಅಲ್ಲದೇ ಶಾಸಕರಾಗಿದ್ದಾಗ ಯಾವ್ಯಾಯ ಮುಖ್ಯಮಂತ್ರಿ ಬಳಿ ಏನೇನೂ ಕೆಲಸ ಮಾಡಿಸಿಕೊಂಡಿದ್ದಾರೆ ಎಂಬುದು ಗೊತ್ತಿದೆ. ಯಡಿಯೂರಪ್ಪರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಸುಮಾರು 73 ಎಕರೆ ಜಮೀನು ಒತ್ತುವರಿ ಮಾಡಿಲ್ವಾ ಎಂದು ಪ್ರಶ್ನಿಸಿದ್ದಾರೆ.

ದೊಂಬರಾಟ, ಪ್ರಚಾರಕ್ಕೋಸ್ಕರ ಹೋರಾಟ ಮಾಡುತ್ತಿರುವ ವಾಟಾಳ್ ನಾಗರಾಜ್ ತಾಕತ್ತಿದ್ದರೆ ಬಂದ್ ಮಾಡಿ ತೋರಿಸಲಿ. ವಾಟಾಳ್ ಓರ್ವ ನಕಲಿ ಹೋರಾಟಗಾರ. ನಿಮ್ಮ ಜಮೀನಿನಲ್ಲಿ‌ ಕೆಲಸ ಮಾಡುವುದು ಕನ್ನಡಿಗರಾ? ತಮಿಳಿಗರಾ? ನಮಗೂ ಗೊತ್ತಿದೆ‌. ಕನ್ನಡಪರ ಹೋರಾಟಗಾರರ ಬಗ್ಗೆ ಅಭಿಮಾನ ಇದೆ‌. ಅಪಾರ್ಥ ಕಲ್ಪಿಸುವುದು ಬೇಡ. ವಾಟಾಳ್ ನಾಗರಾಜ್ ಬಂದ್ ಮಾಡಿಸಿದರೆ ನಾವೇನೂ ಕೈಕಟ್ಟಿ ಕುಳಿತುಕೊಳ್ತೇವಾ ಎಂದು ಸವಾಲು ಹಾಕಿದರು‌.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿಸೆಂಬರ್ 5 ರಂದು ಕರೆ ನೀಡಿರುವ ಬಂದ್ ಯಶಸ್ವಿ ಆಗಲ್ಲ. ಬಿಜೆಪಿ ಕಾರ್ಯಕರ್ತರು ಬಂದ್ ಯಶಸ್ವಿಯಾಗದಂತೆ ನೋಡಿಕೊಳ್ತೇವೆ. ಮರಾಠ ಸಮುದಾಯದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಲಾಗಿದೆ‌. ಭಾಷೆ ಅಭಿವೃದ್ಧಿಗೆ ಅಲ್ಲ ಎಂಬುದನ್ನು ಮನಗಾಣಿ. ಗಡಿಯಲ್ಲಿ ಎಂಇಎಸ್ ತಂಟೆ ತೆಗೆದರೆ ನಾವು ಸುಮ್ಮನಿರಲ್ಲ ಎಂದಿದ್ದಾರೆ.

ಮಹಾರಾಷ್ಟ್ರ ಡಿಸಿಎಂ ಹೇಳಿಕೆಗೆ ಸಿಎಂ ಯಡಿಯೂರಪ್ಪ ಅವರೇ ಉತ್ತರಿಸಿದ್ದಾರೆ. ಮರಾಠಿಗರು ಕನ್ನಡದವರೇ. ಕನ್ನಡಪರ ಹೋರಾಟಗಾರರು ಮಾತ್ರವಲ್ಲ, ನಾವೂ ಕನ್ನಡದಲ್ಲಿಯೇ ಮಾತನಾಡೋದು. ಜನರು ಮತ ಹಾಕಿ ನಮ್ಮನ್ನು ಗೆಲ್ಲಿಸಿದ್ದಾರೆ. ನಾವು ಸುಮ್ಮನಿರಲು ಆಗುತ್ತಾ ಎಂದು ಖಾರವಾಗಿಯೇ ಹೇಳಿದರು.

ABOUT THE AUTHOR

...view details