ದಾವಣಗೆರೆ:ನಾನು ಸಿಎಂ ಪರ ಮಾತನಾಡಿದಕ್ಕೆ ಅನುದಾನ ಕೊಟ್ಟಿದ್ದಾರೆ ಎನ್ನುವುದು ಸುಳ್ಳು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು. ಹೊನ್ನಾಳಿಯ ಅವಳಿ ತಾಲೂಕುಗಳಿಗೆ ಕೋಟ್ಯಂತರ ರೂಪಾಯಿ ಸಿಎಂ ಅನುದಾನ ನೀಡಿದ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಇಲ್ಲಿನ ಕೆರೆ ತುಂಬಿಸುವ ಸಲುವಾಗಿ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಿದ್ದೆ. ಇದೀಗ 418 ಕೋಟಿ ಅನುಮೋದನೆಯಾಗಿದೆ. 460 ಕೋಟಿ ಈಗಾಗಲೇ ಡಿಪಿಆರ್ ಆಗಿದೆ. ಹೆಚ್ಚುವರಿ ಹಣ ಕೊಡುವುದಾಗಿ ಹೇಳಿದ್ದಾರೆ ಎಂದರು.
ಸಿಎಂ ಪರ ಮಾತನಾಡಿದ್ದಕ್ಕೆ ಅನುದಾನ ನೀಡಿದ್ದಾರೆ ಎನ್ನುವುದು ತಪ್ಪು: Renukacharya - Davangere latest News
ಸಿಎಂ ಯಡಿಯೂರಪ್ಪ ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದ ಮೇರು ನಾಯಕ. ನಾನು ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಅನುದಾನ ಕೊಟ್ಟಿದ್ದಾರೆ ಎನ್ನುವುದು ಸುಳ್ಳು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು.
ಶಾಸಕ ಎಂ.ಪಿ ರೇಣುಕಾಚಾರ್ಯ
ಹೊನ್ನಾಳಿ ನ್ಯಾಮತಿ ತಾಲೂಕುಗಳಿಗೆ ಮುಖ್ಯಮಂತ್ರಿಗಳು ಕೊರೊನಾ ಸಂದರ್ಭದಲ್ಲಿ ಕೊಡುಗೆ ನೀಡಿದ್ದಾರೆ. ನಾನು ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಅನುದಾನ ಕೊಟ್ಟಿದ್ದಾರೆ ಎನ್ನುವುದು ನೂರಕ್ಕೆ ನೂರು ಸುಳ್ಳು ಎಂದರು.
ಸಿಎಂ ಯಡಿಯೂರಪ್ಪ ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದ ಮೇರು ನಾಯಕ. ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರ ಪರವಾಗಿ ಮಾತನಾಡೋದು ಬಿಟ್ಟು, ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ದೇವೇಗೌಡರ ಪರ ಮಾತನಾಡಲು ಆಗುತ್ತಾ. ಅವರ ಪರವಾಗಿ ನಾವು ನಿಲ್ಲಲೇಬೇಕು. ಇದರಲ್ಲಿ ಯಾವುದೇ ವಿಶೇಷ ಆರ್ಥ ಇಲ್ಲ ಎಂದರು.