ದಾವಣಗೆರೆ :ಚುನಾವಣೆಗೆ 1 ವರ್ಷ ಬಾಕಿ ಇದೆ. ಸಿಎಂ ಬೊಮ್ಮಾಯಿ ಅವರು ಎಲ್ಲಿಂದ ಸ್ಪರ್ಧೆ ಮಾಡಬೇಕು ಅನ್ನೋದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ಅವರು ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಸಿಎಂ ಯಾರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದು, ಬಿಡುವುದು ಹೈಕಮಾಂಡ್ ಜತೆ ಚರ್ಚಿಸಿ ನಿರ್ಧರಿಸುತ್ತಾರೆ. ನಾನು ಹೇಳುವ ರೀತಿ ಸಂಪುಟ ಪುನಾರಚನೆ ಆಗಲ್ಲ.
ಸಚಿವನಾಗುವ ಯಾವುದೇ ವ್ಯಕ್ತಿಗೆ ಸಾಕಷ್ಟು ಕಾಲಾವಕಾಶ ಬೇಕು. ಗ್ರಾಮ ಪಂಚಾಯತ್ ಅಧ್ಯಕ್ಷರ ರೀತಿ ಪದೇಪದೆ 3-6 ತಿಂಗಳಿಗೆ ಬದಲಾಯಿಸಬಾರದು. ವರ್ಷಕ್ಕೊಮ್ಮೆ ಸಚಿವರು ಬದಲಾದ್ರೆ ಕೆಲಸ ಮಾಡೋದು ಕಷ್ಟ ಎಂದರು.
ಸಂಪುಟ ಪುನಾರಚನೆ ಕುರಿತಂತೆ ಶಾಸಕ ಎಂ ಪಿ ರೇಣುಕಾಚಾರ್ಯ ಮಾತನಾಡಿರುವುದು.. ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು..ಹಿಂದೂ ಯುವಕರ ಕೊಲೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನುಕ್ರಮಕ್ಕೆ ಸಿಎಂ ಜತೆ ಮಾತನಾಡಿದ್ದೇನೆ. ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು.
ಹಿಂದೂ ಹರ್ಷನ ಕೊಲೆ ಆರೋಪಿಗಳಿಗೆ ಎನ್ಕೌಂಟರ್ ಮಾಡಬೇಕು. ಹಿಂದೂ ಯುವಕರನ್ನು ಟಾರ್ಗೆಟ್ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು. ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡಲು ಗೃಹ ಸಚಿವರಿಗೆ ಒತ್ತಾಯಿಸುತ್ತೇನೆ ಎಂದರು.
ನ್ಯಾಯಾಧೀಶರಿಗೆ ಪ್ರಾಣ ಬೆದರಿಕೆ ಒಡ್ಡುತ್ತಾರೆ ಅಂದ್ರೆ ಸಾಮಾನ್ಯರ ಗತಿಯೇನು?. ಇದು ಪಾಕಿಸ್ತಾನ ಅಂದುಕೊಂಡಿದ್ದಾರೆ. ಹುಷಾರ್ ಇದೆಲ್ಲ ಇಲ್ಲಿ ನಡೆಯಲ್ಲ. ಇದು ಭಾರತ ದೇಶ. ಇಲ್ಲಿ ಎಲ್ಲರೂ ಕಾನೂನನ್ನು ಗೌರವಿಸಬೇಕು.
ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ಬೆದರಿಕೆ ಹಾಕಿದವರನ್ನು ಮಟ್ಟ ಹಾಕುತ್ತೇವೆ. ಯುಪಿ ಮಾದರಿಯಲ್ಲಿ ರಾಜ್ಯದಲ್ಲಿ ಸಿಎಂ ಕಠಿಣ ಕಾನೂನು ಜಾರಿಗೊಳಿಸುತ್ತಾರೆ. ಈಗಾಗಲೇ ಮಾಜಿ ಸಿಎಂ ಬಿಎಸ್‌ವೈ ವಿವಿಧ ಕಾನೂನು ಜಾರಿಗೆ ತಂದಿದ್ದರು ಎಂದರು.
ಭಗವದ್ಗೀತೆ ಅಧ್ಯಯನದಿಂದ ಮಕ್ಕಳ ಮನಃಪರಿವರ್ತನೆ..ಕೇವಲ ಪ್ರಚಾರ ಸ್ವಾರ್ಥ, ರಾಜಕಾರಣಕ್ಕಾಗಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುತ್ತಿಲ್ಲ. ಬದಲಾಗಿ ಭಗವದ್ಗೀತೆ ಅಧ್ಯಯನದಿಂದ ಮಕ್ಕಳ ಮನಃಪರಿವರ್ತನೆ ಆಗುತ್ತೆ. ಇದಕ್ಕಾಗಿ ಸಿಎಂ ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಓದಿ:ಪ್ರಾಚೀನ ಕಾಲದ ವಿಷ್ಣುವಿನ ಕಂಚಿನ ವಿಗ್ರಹ ಮಲೇಷ್ಯಾಕ್ಕೆ ರಫ್ತು ಯತ್ನ: ಓರ್ವನ ಬಂಧನ