ದಾವಣಗೆರೆ :ಕನ್ಹಯ್ಯ ಲಾಲ್ನ ಹತ್ಯೆ ಖಂಡಿಸಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ, ನಾವು ಕೈಗೆ ಬಳೆ ಹಾಕಿಕೊಂಡಿಲ್ಲ, ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ, ಯಾರು ಹಿಂದೂಗಳನ್ನು ಸೀಳುತ್ತಾರೋ ನಾವು ಕೂಡ ಅಂತಹವರನ್ನು ಸೀಳಿ ಪ್ರತ್ಯುತ್ತರ ಕೊಟ್ಟಾಗ ಮಾತ್ರ ಕನ್ಹಯ್ಯ ಲಾಲ್ನ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಕನ್ಹಯ್ಯ ಲಾಲ್ ಹತ್ಯೆ ಮಾಡಿದವರನ್ನು ಗುಂಡಿಟ್ಟು ಹೊಡೆಯಬೇಕು. ಆಗ ಮಾತ್ರ ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಸಿಗುತ್ತದೆ. ಆತನನ್ನು ಹೇಗೆ ಕೊಲೆ ಮಾಡಿದ್ರೋ ಹಾಗೇ ಅವರನ್ನು ಕೊಲ್ಲಬೇಕು. ಆಗ ಮಾತ್ರ ಮುಯ್ಯಿಗೆ ಮುಯ್ಯಿ ಆಗುತ್ತದೆ. ಹಿಂದುಗಳ ಹತ್ಯೆ ಮಾಡಿದವರನ್ನ ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು. ಇದೇನು ಪಾಕಿಸ್ತಾನ ಅಂದುಕೊಂಡಿದ್ದಾರಾ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದು.. ಆತ ಪೋಸ್ಟ್ ಶೇರ್ ಮಾಡಿದ್ದಕ್ಕೆ ಕತ್ತು ಸೀಳಿ ಮೋದಿ ಬಗ್ಗೆ ಧಮ್ಕಿ ಹಾಕಿದ್ದಾರೆ. ನರೇಂದ್ರ ಮೋದಿಗೆ ಧಮ್ಕಿ ಹಾಕ್ತಾರೆ ಎಂದರೆ ಈ ನನ್ ಮಕ್ಳಿಗೆ ತಾಖತ್ ಎಷ್ಟು ಇರಬೇಕು. ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಈ ಘಟನೆಗೆ ನೇರ ಹೊಣೆ. ಜೀವ ಬೆದರಿಕೆ ಎಂದು ಹೇಳಿ ಮನವಿ ಮಾಡಿದರು ಗಮನ ಹರಿಸಲಿಲ್ಲ. ಈ ಸಾವಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಆ ಸರ್ಕಾರವನ್ನು ವಜಾ ಮಾಡಬೇಕು, ರಾಷ್ಟ್ರಪತಿ ಆಡಳಿತ ತರಬೇಕು. ಅಲ್ಲಿರುವ ಹಿಂದುಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರ ಹೆಸರಿನಲ್ಲಿ ಸಿದ್ದರಾಮ ಇದೆ. ಯಾಕೇ ಈ ಪ್ರಕರಣವನ್ನು ಸಿದ್ದರಾಮಯ್ಯ ಖಂಡಿಸಲಿಲ್ಲ. ಕೇವಲ ಸಂತಾಪ ಸೂಚಿಸಿದರೆ ಸಾಕಾ, ಕೊಲೆಗಾರರನ್ನು ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು ಎಂದು ಹೇಳಬೇಕು. ಆದ್ರೇ, ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಅವರನ್ನು ಬೆಂಬಲಿಸುತ್ತೀರಿ. ನನಗೂ ಕೊಲೆ ಬೆದರಿಕೆ ಬಂತು, ನಾನು ಹೆದರಿದ್ನಾ, ನಾನು ಹೇಡಿ ಅಲ್ಲ. ಯಾರು ಹಿಂದೂಗಳನ್ನು ಸೀಳುತ್ತಾರೋ ಅವರನ್ನು ನಾವು ಅದೇ ರೀತಿ ಪ್ರತ್ಯುತ್ತರ ಕೊಟ್ಟಾಗ ಮಾತ್ರ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದಿದ್ದಾರೆ.
ಇದನ್ನೂ ಓದಿ:ಉದಯಪುರ ಕೃತ್ಯ ಖಂಡನೀಯ, ಪ್ರಧಾನಿ ಮೋದಿ ಮೌನ ಮುರಿಯಲಿ- ಖರ್ಗೆ