ದಾವಣಗೆರೆ :ಸಹಜವಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಆದ್ದರಿಂದ ಅಮಿತ್ ಶಾ ಕೂಡ ಹೀಗೆ ಹೇಳಿದ್ದಾರೆ ಎಂದು ಹೊನ್ನಾಳಿಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದರು.
ಅಮಿತ್ ಶಾ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು,'ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ' ಎಂಬ ಅಮಿತ್ ಶಾ ಹೇಳಿಕೆಯನ್ನು ಯಡಿಯೂರಪ್ಪನವರನ್ನು ಸೈಡ್ಲೈನ್ ಮಾಡಿದ್ರು, ಜಗದೀಶ್ ಶೆಟ್ಟರ ಅವರನ್ನು ಸೈಡ್ ಲೈನ್ ಮಾಡಿದ್ರು ಎಂದು ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತವೆ. ಇದು ನೂರಕ್ಕೆ ನೂರು ಸತ್ಯಕ್ಕೆ ದೂರವಾಗಿದೆ ಎಂದ್ರು.
ಯಡಿಯೂರಪ್ಪ ಕೋವಿಡ್ ಸಂದರ್ಭವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಮೊನ್ನೆ ದಾವಣಗೆರೆಯಲ್ಲಿ ಕೇಂದ್ರ ಗೃಹ ಸಚಿವರು ಹೇಳಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಬಿಎಸ್ವೈ ಅವರ ಗಟ್ಟಿ ನಿಲುವಿನ ಬಗ್ಗೆ ಪ್ರಧಾನಿ, ಸಚಿವ ನಡ್ಡಾ, ಅಮಿತ್ ಶಾ ಸೇರಿ ವರಿಷ್ಠರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಚುನಾವಣೆ ಎಂದು ಹೇಳಿದ್ದಾರೆ, ಇದರಲ್ಲಿ ಯಾವುದೇ ತಪ್ಪು ಅರ್ಥೈಸುವುದು ಬೇಡ. ಮುಖ್ಯಮಂತ್ರಿ ಆಗಿರುವುದರಿಂದ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
'ಲಿಂಗಾಯತರನ್ನು ಒಡೆಯಲು ಪ್ರಯತ್ನಿಸಿ ಸಿದ್ದರಾಮಯ್ಯ ಸರ್ಕಾರ ವಿಫಲ'
ಸಿದ್ದರಾಮಯ್ಯ ಸರ್ಕಾರ ಇದ್ದಾಗ ವೀರಶೈವ ಲಿಂಗಾಯತರನ್ನು ಒಡೆಯಲು ಪ್ರಯತ್ನ ಮಾಡಿ ವಿಫಲರಾಗಿದ್ದೀರಿ, ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಎಂದು ನಿಮ್ಮ ಬಾಯಲ್ಲಿ ಬರಬಾರದು. ಅಖಂಡ ವೀರಶೈವ ಲಿಂಗಾಯತ, ಒಳ ಪಂಗಡ ಸೇರಿಸಿ ವೀರಶೈವ ಲಿಂಗಾಯತ ಧರ್ಮಕ್ಕೆ ಕೇಳಿ.
ಹಿಂದುಳಿದ ವರ್ಗದ ಸ್ಥಾನಮಾನಕ್ಕೆ ಕೇಳಿ ಒತ್ತಾಯ ಮಾಡಿ, ಆಗ ನಾವು ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ. ಆದರೆ, ವೀರಶೈವ ಲಿಂಗಾಯತರನ್ನು ಒಡೆಯಲು ಅವಕಾಶ ಕೊಡೋದಿಲ್ಲ, ಈಗಾಗಲೇ ಜನರು ನಿಮಗೆ ತಕ್ಕ ಪಾಠ ಕಲಿಸಿದ್ದಾರೆ. ಮತ್ತೆ ಏನಾದ್ರು ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಮಾತನಾಡಿದರೆ ನಿಮಗೆ ಮುಖಭಂಗ ಆಗುತ್ತದೆ ಎಂದರು.