ದಾವಣಗೆರೆ:ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ತಾಂತ್ರಿಕ ಸಹಾಯಕ ಸಿಬ್ಬಂದಿ ರೈತರಿಂದ ಹಣ ಪಡೆದಿದ್ದಾನೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ಶಾಸಕ ರೇಣುಕಾಚಾರ್ಯ ಕ್ಲಾಸ್ ತೆಗೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ನಡೆದಿದೆ.
ರೈತರಿಂದ ಲಂಚಪಡೆದಿದ್ದ ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಶಾಸಕ ರೇಣುಕಾಚಾರ್ಯ ತರಾಟೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ತಾಂತ್ರಿಕ ಸಹಾಯಕರು ಹಣ ಪಡೆದಿದ್ದಾರೆ ಸ್ವಾಮೀ ಎಂದು ಕೆಲ ರೈತರು ಶಾಸಕರ ಬಳಿ ಅಳಲು ತೊಡಿಕೊಂಡಿದ್ದರು. ಇದರಿಂದ ಕೆಲ ಗುತ್ತಿಗೆ ಆಧಾರಿತ ಸಿಬ್ಬಂದಿ ಬಳಿ ತೆರಳಿದ ಶಾಸಕ ರೇಣುಕಾಚಾರ್ಯ ಅವರನ್ನ ತರಾಟೆಗೆ ತೆಗೆದುಕೊಂಡರು.
ಈ ವೇಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ. ಚನ್ನಪ್ಪನವರಿಗೆ ದೂರವಾಣಿ ಕರೆ ಮಾಡಿ, 'ನನ್ನ ಕ್ಷೇತ್ರದಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ಅದನ್ನು ಜನ ನಮ್ಮ ಮೇಲೆ ಅಪಾರ್ಥವಾಗಿ ತಿಳಿದುಕೊಳ್ಳುತ್ತಾರೆ. ತಾಂತ್ರಿಕ ಸಹಾಯಕನೋರ್ವ ಕೆಳಗಿನಿಂದ ಮೇಲೆ ಮಾಮೂಲಿ ಕೊಡಬೇಕೆಂದು ಆರೋಪ ಮಾಡಿ ರೈತರಿಂದ ಹಣ ಪಡೆದಿದ್ದಾರೆ. ಅಂತವರನ್ನು ತಕ್ಷಣ ಕೆಲಸದಿಂದ ತೆಗೆದು ಹಾಕಿ, ಇಲ್ಲ ಬೇರೆ ಕಡೆ ವರ್ಗಾವಣೆ ಮಾಡಿ' ಎಂದು ತಾಕೀತು ಮಾಡಿದ್ದಾರೆ.
ಓದಿ:ಕಾಂಗ್ರೆಸ್‌ಗೆ ಹೋಗಲ್ಲ, ಕೊನೆಯ ಉಸಿರಿನವರೆಗೂ ಬಿಜೆಪಿಯಲ್ಲೇ ಇರುವೆ: ಶ್ರೀರಾಮುಲು