ದಾವಣಗೆರೆ: ಮುಖ್ಯಮಂತ್ರಿ ಬದಲಾವಣೆ ಅಂತ ಹೇಳ್ತಿಯಲ್ಲ, ತಾಕತ್ ಇದ್ರೆ ಸಿಎಂ ಬದಲಾವಣೆ ಮಾಡು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಳೆಹರಳಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಒಬ್ಬ ಎಂಟಿಆರ್ ಫುಡ್ ಅಲ್ಲ, ಪಕ್ಷವನ್ನು ತಳಮಟ್ಟದಿಂದ ಅಧಿಕಾರಕ್ಕೆ ತಂದವರು. ಬಿಎಸ್ವೈ ಅವರನ್ನ ಸಿಎಂ ಮಾಡಿದ್ದು ನೀನಾ? ಅವರನ್ನು ಮುಖ್ಯಮಂತ್ರಿ ಮಾಡಿದ್ದು ಮೋದಿ, ಅಮಿತ್ ಶಾ. ಅವರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿನಗಿಲ್ಲ. ಯತ್ನಾಳ್ ನೀನೊಬ್ಬ ಭ್ರಷ್ಟ. ನಿನ್ನ ಮಗನನ್ನು ಹಿಡಿದುಕೊಂಡು ರಾಜಕೀಯ ಮಾಡ್ತಿಯಾ. ನೀನು ನಿನ್ನ ಹೆಂಡತಿ-ಮಕ್ಕಳನ್ನು ಹೊರಗೆ ಕಳುಹಿಸಿ ಆಮೇಲೆ ಮಾತನಾಡು ಎಂದು ಏಕಚವನದಲ್ಲೇ ವಾಗ್ದಾಳಿ ನಡೆಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೀನು ಮೂಲ ಬಿಜೆಪಿಯವನಲ್ಲ. ನಿನ್ನನ್ನು ಪಕ್ಷ ಉಚ್ಛಾಟನೆ ಮಾಡಿದಾಗ ಪಕ್ಷಕ್ಕೆ ಕರೆ ತಂದಿದ್ದು ಯಡಿಯೂರಪ್ಪ. ಅದೇ ಬಿಎಸ್ವೈ ಸಿಎಂ ಆಗಿ ಸಂಪೂರ್ಣ ಅವಧಿ ಪೂರೈಸುತ್ತಾರೆ. ಅವರು ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಯತ್ನಾಳ್ ಹೇಳಿಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಅವನು ಕಾಂಗ್ರೆಸ್ ಏಜೆಂಟ್ ರೀತಿ ವರ್ತನೆ ಮಾಡ್ತಾನೆ. ಆತನ ಹೇಳಿಕೆಯಿಂದ ಉಪಚುನಾವಣೆಗೆ ಪರಿಣಾಮ ಬೀರುತ್ತದೆ. ಈತನ ಹೇಳಿಕೆ ಹಿಂದೆ ಕಾಂಗ್ರೆಸ್ ಪಿತೂರಿ ಇದೆ ಎಂದು ಆರೋಪಿಸಿದರು.
ಓದಿ:ಬಿಜೆಪಿ ನಾಯಕರು ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್ಚುತ್ತಿದ್ದಾರೆ; ಸಿದ್ದರಾಮಯ್ಯ
ತಾಕತ್ ಇದ್ದರೆ ಈಗ ರಾಜೀನಾಮೆ ನೀಡಿ ಮತ್ತೆ ವಿಜಯಪುರದಿಂದ ಗೆದ್ದು ಬಂದು ಆಮೇಲೆ ಮಾತಾಡು. ನಾಳೆ ಸೋಮವಾರ ವಿಧಾನಸಭೆಯ ಪಡಸಾಲೆಯಲ್ಲಿ ಶಾಸಕರು ಸಭೆ ಸೇರಿ ನಿನಗೆ ಸರಿಯಾದ ಉತ್ತರ ಕೊಡ್ತೀವಿ ಎಂದು ಕಿಡಿಕಾರಿದರು.