ಕರ್ನಾಟಕ

karnataka

ETV Bharat / state

CC Center ನಲ್ಲಿ ಸೋಂಕಿತ ಮಕ್ಕಳ ಹುಟ್ಟುಹಬ್ಬ, ಹೊಲಕ್ಕೆ ತೆರಳಿ ಉಳುಮೆ...ಇದು ರೇಣುಕಾಚಾರ್ಯ ಹೊಸ ಅವತಾರ! - children birthday at CC Center

ಕೋವಿಡ್ ಕೇರ್ ಸೆಂಟರ್​ನಲ್ಲಿ ವಾಸ್ತವ್ಯ ಹೂಡಿ ಶಾಸಕ ರೇಣುಕಾಚಾರ್ಯ ಸೋಂಕಿತರ ಸೇವೆ ಮಾಡಿ ಗಮನ ಸೆಳೆದಿದ್ದರು. ಈಗ ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸುವ ಮೂಲಕ ಮತ್ತೊಮ್ಮೆ ಅವರ ಮನ ಗೆದ್ದಿದ್ದಾರೆ.

Renukacharya celebrated children's birthday at CC Center
ಮಕ್ಕಳ ಹುಟ್ಟುಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ

By

Published : Jun 23, 2021, 9:09 PM IST

ದಾವಣಗೆರೆ:ಹಲವುಸಮಾಜಮುಖಿ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿರುವ ಶಾಸಕ ರೇಣುಕಾಚಾರ್ಯ ಕೊರೊನಾ ಸೋಂಕಿತರ ಸೇವೆ ಮಾಡಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ಕೋವಿಡ್ ಕೇರ್ ಸೆಂಟರ್​ನಲ್ಲಿರುವ ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸಿ ಮತ್ತೊಮ್ಮೆ ಮನಗೆದ್ದಿದ್ದಾರೆ.

ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ತಂದೆ - ತಾಯಿ ಹಾಗೂ ಪಾಲಕರ ಅನುಪಸ್ಥಿತಿಯಲ್ಲಿ ಬಾಲಕಿಯರ ಹುಟ್ಟುಹಬ್ಬ ಆಚರಿಸುವ ಮೂಲಕ ಶಾಸಕ ರೇಣುಕಾಚಾರ್ಯ, ಮಕ್ಕಳ ಮನಸ್ಸು ಗೆದ್ದಿದ್ದಾರೆ. ಅದ್ಧೂರಿ ಹುಟ್ಟುಹಬ್ಬದಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದು, ಈ ವೇಳೆ ಅವರಿಂದ ಕೇಕ್​ ಕತ್ತರಿಸಿ ಸಿಹಿ ತಿನಿಸಿದರು. ಈ ಮೂಲಕ ಸೋಂಕಿತ ಮಕ್ಕಳ ಕೊರಗನ್ನು ಶಾಸಕ ರೇಣುಕಾಚಾರ್ಯ ದೂರವಾಗಿಸಿದ್ದಾರೆ.

ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ

ಉಳುಮೆ ಮಾಡಿ ಗಮನ ಸೆಳೆದ ಶಾಸಕ:

ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಂಗನಾಥ್ ಎಂಬುವರು ಲಾಕ್​ಡೌನ್ ಹಿನ್ನೆಲೆ ಕುಟುಂಬ ಸಮೇತ ಹೊನ್ನಾಳಿಗೆ ಆಗಮಿಸಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದರು‌. ಇವರು ಉಳುಮೆ‌ ಮಾಡುವುದನ್ನು ನೋಡಿದ ಶಾಸಕ ಎಂಪಿ ರೇಣುಕಾಚಾರ್ಯ ಜಮೀನಿಗೆ ಭೇಟಿ ನೀಡಿ ಅವರ ಜೊತೆ ಬೇಸಾಯ ಮಾಡಿದರು.

ಉಳುಮೆ ಮಾಡಿ ಗಮನ ಸೆಳೆದ ಶಾಸಕ ರೇಣುಕಾಚಾರ್ಯ

ABOUT THE AUTHOR

...view details