ಕರ್ನಾಟಕ

karnataka

ETV Bharat / state

ರೇಣುಕಾಚಾರ್ಯ ವಿರುದ್ಧ ಮಾಜಿ ಶಾಸಕ ಶಾಂತನಗೌಡ ಕೆಂಡಾಮಂಡಲ - ಮಾಜಿ ಶಾಸಕ ಕೆಂಡಾಮಂಡಲ

ವಯಸ್ಸಿಗೆ ಸಹ ಬೆಲೆ ಕೊಟ್ಟಿಲ್ಲ. ಏಕವಚನದಲ್ಲಿ ಮಾತನಾಡಿರುವುದು ರೇಣುಕಾಚಾರ್ಯರ ಸಂಸ್ಕೃತಿ ತೋರಿಸುತ್ತದೆ. ಯಾರೋ ಕೊಟ್ಟ ನೆರವನ್ನು ತನ್ನದೆಂದು ಹೇಳಿಕೊಂಡು ಪ್ರಚಾರ ಮಾಡಿರುವ ಅವರು, ಹಲವು ಬಾರಿ ಲಾಕ್​ಡೌನ್ ಉಲ್ಲಂಘನೆ ಮಾಡಿದ್ದು, ಸಿಎಂ ಯಡಿಯೂರಪ್ಪನವರೇ ಬೈದರೂ ಬುದ್ಧಿ ಬಂದಿಲ್ಲ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಟೀಕಿಸಿದ್ದಾರೆ.

ಶಾಂತನಗೌಡ
ಶಾಂತನಗೌಡ

By

Published : Apr 28, 2020, 2:51 PM IST

ದಾವಣಗೆರೆ: ಸಂಕಷ್ಟದಲ್ಲಿರುವವರಿಗೆ ಸಂಘ-ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಆದರೆ ಇದನ್ನು ದುರುಪಯೋಗ ಮಾಡಿಕೊಂಡು ಸಿಎಂ ರಾಜಕೀಯ ಕಾರ್ಯದರ್ಶಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಹೊನ್ನಾಳಿ ತಾಲೂಕಿನಲ್ಲಿ 500ಕ್ಕೂ ಹೆಚ್ಚು ಕಿಟ್​ಗಳನ್ನು ವಿತರಿಸಿಲ್ಲ. ವೈಯಕ್ತಿಕವಾಗಿ ಒಂದೂ‌ ಕಿಟ್ ರೇಣುಕಾಚಾರ್ಯ ವಿತರಿಸಿಲ್ಲ ಎಂದು ಕಾಂಗ್ರೆಸ್​ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಹಿರಿಯ. ವಯಸ್ಸಿಗೆ ಸಹ ಬೆಲೆ ಕೊಟ್ಟಿಲ್ಲ. ಏಕವಚನದಲ್ಲಿ ಮಾತನಾಡಿರುವುದು ರೇಣುಕಾಚಾರ್ಯರ ಸಂಸ್ಕೃತಿ ತೋರಿಸುತ್ತದೆ. ಯಾರೋ ಕೊಟ್ಟ ನೆರವನ್ನು ತನ್ನದೆಂದು ಹೇಳಿಕೊಂಡು ಪ್ರಚಾರ ಮಾಡಿರುವ ಅವರು, ಹಲವು ಬಾರಿ ಲಾಕ್​ಡೌನ್ ಉಲ್ಲಂಘನೆ ಮಾಡಿದ್ದು, ಸಿಎಂ ಯಡಿಯೂರಪ್ಪನವರೇ ಬೈದರೂ ಬುದ್ಧಿ ಬಂದಿಲ್ಲ ಎಂದರು.

ಮಾದ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಶಾಂತನಗೌಡ

ದಿನಸಿ ಕಿಟ್ ವಿತರಣೆ ಹಾಗೂ ನಿತ್ಯವೂ ನಾಲ್ಕೈದು ಸಾವಿರ ಜನರಿಗೆ ಆಹಾರ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಬಾರದೇ? ತಹಶೀಲ್ದಾರ್ ಕಚೇರಿಗೆ ಬರುವಂತೆ ಹೇಳಿದ್ದು ಅವರೇ. ಹಾಗಾಗಿ ಹೋಗಿದ್ದೆವು. ಆದರೆ ಅವರೇ ಬಂದಿಲ್ಲ. ಪಾರದರ್ಶಕವಾಗಿದ್ದರೆ ಯಾಕೆ ಚರ್ಚೆಗೆ ಬರಲಿಲ್ಲ ಎಂದು ಶಾಂತನಗೌಡ ಪ್ರಶ್ನಿಸಿದರು.

ABOUT THE AUTHOR

...view details