ದಾವಣಗೆರೆ:ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ಕಿಚ್ಚು ಜೋರಾಗುತ್ತಿದೆ. ಮತ್ತೊಂದೆಡೆ ಈ ಕಾಯ್ದೆ ಪರ ಬಿಜೆಪಿ ಅಬ್ಬರವೂ ಇನ್ನೂ ನಿಂತಿರುವಂತೆ ಕಾಣ್ತಿಲ್ಲ. ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಆಯೋಜಿಸಿದ್ದ ಪೌರತ್ವ ಪರ ಕಾಯ್ದೆ ಪರ ಸಮಾವೇಶ ನಡೆಯಿತು. ಈ ವೇಳೆ ಮಾತಿನ ಭರಾಟೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೇಸರಿ ಬಾವುಟ ಕಿತ್ತು ಹಾಕಿದ್ರೆ ದೇಶದ್ರೋಹಿಗಳಾಗುತ್ತೀರಿ.. ಹೀಗಂತಾ ರೇಣುಕಾಚಾರ್ಯ ಹೇಳಿದರು.. - Union Home Minister Amit Shah
ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಶೇಖರಿಸುವ ಮೂಲಕ ಭಯೋತ್ಪಾದನೆಗೆ ಪ್ರೋತ್ಸಾಹಿಸಲಾಗುತ್ತಿದೆ. ಇದನ್ನು ನೋಡಿ ಸುಮ್ಮನಿರಬೇಕಾ ಎಂದು ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುವ ಈ ಸಮಾವೇಶದಲ್ಲಿ ಮಾತನಾಡಿದ ರೇಣುಕಾಚಾರ್ಯ, ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಶೇಖರಿಸುವ ಮೂಲಕ ಭಯೋತ್ಪಾದನೆಗೆ ಪ್ರೋತ್ಸಾಹಿಸಲಾಗುತ್ತಿದೆ. ಇದನ್ನು ನೋಡಿ ಸುಮ್ಮನಿರಬೇಕಾ ಎಂದರು. ಕೇಸರಿಯ ಬಂಟಿಂಗ್ಸ್, ಫ್ಲೆಕ್ಸ್, ಫ್ಲ್ಯಾಗ್‌ಗಳನ್ನ ತೆರವುಗೊಳಿಸಬಾರದು. ಇದು ಸ್ವಾಭಿಮಾನದ ಸಂಕೇತ. ಹಿಂದೂ ಸಂಕೇತ. ಬಿಜೆಪಿಯ ಒಂದೇ ಒಂದು ಕೇಸರಿ ಬಾವುಟ ಬಿಚ್ಚಿದರೆ ದೇಶದ್ರೋಹಿಗಳಾಗುತ್ತೀರಿ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಹೌದು ಹುಲಿಯಾ ಅಲ್ಲ, ಹೌದು ಸೋನಿಯಾ. ಹಾಗಾಗಿ, ರಾಜ್ಯದಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಸೋನಿಯಾ ಅವರೂ ಸುಳ್ಳು ಹೇಳ್ತಾರೆ. ಸಿದ್ದರಾಮಯ್ಯನವರು ಸುಳ್ಳು ಹೇಳ್ತಾರೆ ಎಂದು ದೂರಿದರು.