ದಾವಣಗೆರೆ:ಜಿಲ್ಲಾ ಕೋವಿಡ್-19 ನಿಗದಿತ ಆಸ್ಪತ್ರೆಯಿಂದ ಗುಣಮುಖರಾದ 13 ಜನರನ್ನು ವೈದ್ಯರು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಜಿಲ್ಲೆಯಲ್ಲಿ ಒಟ್ಟು 142 ಪ್ರಕರಣಗಳ ಪೈಕಿ ಈವರೆಗೆ 79 ಜನರು ಬಿಡುಗಡೆಯಾಗಿದ್ದಾರೆ. ಇನ್ನೂ 59 ಸಕ್ರಿಯ ಪ್ರಕರಣಗಳಿವೆ. ವಿಶೇಷ ಎಂದರೆ P-633 ಸೋಂಕಿತ 70 ವರ್ಷದ ವೃದ್ಧ ಹಾಗೂ P-1249 ಸೋಂಕಿತ 58 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ. ಗುರುವಾರ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.