ದಾವಣಗೆರೆ:ಎಸ್ಟಿ ಮೀಸಲಾತಿ ಸಿಗುವುದಾದರೆ ನಾಳೆಯೇ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕುರುಬ ಸಮುದಯಕ್ಕೆ ಮೀಸಲಾತಿ ಕೊಡಿಸುವುದಾಗಿ ಭರವಸೆ ನೀಡಿದರು.
ಕುರುಬರ ಎಸ್ಟಿ ಮೀಸಲಾತಿಗಾಗಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ: ಈಶ್ವರಪ್ಪ - Preliminary meeting of the Reservation Fight Committee
ದಾವಣಗೆರೆಯಲ್ಲಿ ನಡೆದ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಕುರುಬರಿಗೆ ಎಸ್ಟಿ ಮೀಸಲಾತಿ ಕೊಡಿಸಲು ಕೊನೆಯವರೆಗೂ ಹೋರಾಡುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ದಾವಣಗೆರೆಯಲ್ಲಿ ನಡೆದ ಮೀಸಲಾತಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕುರುಬರ ಕಷ್ಟ ನನಗೆ ಗೊತ್ತು. ಅವರಿಗೆ ಎಸ್ಟಿ ಸೌಲಭ್ಯದ ಅವಶ್ಯಕತೆ ಇದೆ. ಆದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಈ ಬಗ್ಗೆ ಚರ್ಚಿಸಿದ್ದೆ. ತೊಂದರೆ ಕೊಡುವುದಿಲ್ಲ ಮುಂದುವರೆಯಿರಿ ಎಂದು ಹೇಳಿದ್ದರು. ಆದರೆ ಈಗ ತೊಂದರೆ ಕೊಡುತ್ತಿದ್ದಾರೆ ಎಂದರು.
ರಾಜಕಾರಣಕ್ಕಾಗಿ ಎಸ್ಟಿ ಹೋರಾಟ ಮಾಡುತ್ತೇನೆ ಎಂದು ಹಲವರು ಹೇಳುತ್ತಿದ್ದಾರೆ. ಹಿಂದುತ್ವ ಪರ ಇದ್ದೀರಿ, ಈಗ ಜಾತಿ ಪರ ಹೊರಟರೇ ಎಂದು ಕೇಳುತ್ತಿದ್ದಾರೆ. ಏನೇ ಆಗಲಿ ಮೀಸಲಾತಿಗಾಗಿ ಕೊನೆಯವರೆಗೂ ನಾನು ಹೋರಾಟ ಮಾಡುತ್ತೇನೆ. ಮೋದಿ, ಅಮಿತ್ ಶಾ ಜೊತೆ ಮಾತನಾಡಿ ಎಸ್ಟಿ ಮೀಸಲಾತಿ ತರುತ್ತೇವೆ ಎಂದು ಭರವಸೆ ನೀಡಿದರು.