ಕರ್ನಾಟಕ

karnataka

ETV Bharat / state

ದಾವಣಗೆರೆ: ಮಹಿಳೆ ಮೇಲೆ ಇಬ್ಬರು ಕಾಮಾಂಧರಿಂದ ಅತ್ಯಾಚಾರ..ಜಮೀನಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು ಸಂತ್ರಸ್ತೆ! - Rape on woman by two person in Davanagere

ದಾವಣಗೆರೆಯಲ್ಲಿ ಮಹಿಳೆಯ ಮೇಲೆ ಇಬ್ಬರು ಅತ್ಯಾಚಾರ‌ ಎಸಗಿ ಪರಾರಿಯಾಗಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

Rape on woman by two person in Davanagere
ಬುದ್ದಿಮಾಂದ್ಯೆ ಮೇಲೆ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡ ಇಬ್ಬರು ಕಾಮಾಂಧರು

By

Published : Jan 4, 2022, 4:11 PM IST

Updated : Jan 5, 2022, 6:36 PM IST

ದಾವಣಗೆರೆ: ಮಹಿಳೆಯ ಮೇಲೆ ಇಬ್ಬರು ಕಾಮಾಂಧರು ಅತ್ಯಾಚಾರ‌ ಎಸಗಿದ ಘಟನೆ ಜಿಲ್ಲೆಯ ಮ್ಯಾಸರಹಳ್ಳಿಯಲ್ಲಿ ನಡೆದಿದೆ.

ಮಹಿಳೆಗೆ ಮತ್ತು ಬರುವ ಔಷಧಿ ನೀಡಿದ್ದ ಆರೋಪಿಗಳು ಆಕೆಯನ್ನು ಜಮೀನಿಗೆ ಎಳೆದುಕೊಂಡು ಹೋಗಿದ್ದಾರೆ. 25 ವರ್ಷದ ಮಹಿಳೆಯನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾರೆ. ಮ್ಯಾಸರಹಳ್ಳಿಯ ಪ್ರಭು ಹಾಗೂ ಕುಂದುವಾಡದ ಕಿರಣ್ ಆರೋಪಿಗಳೆಂದು ತಿಳಿದು ಬಂದಿದೆ. ಮದ್ಯಪಾನ ಮಾಡಿದ್ದ ಆರೋಪಿಗಳು ಇಡೀ ಸಮಾಜ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಸಿನಿಮೀಯ ಘಟನೆ.. 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು..

ಮಹಿಳೆ ಮೇಲೆ ಇಬ್ಬರು ಕಾಮಾಂಧರಿಂದ ಅತ್ಯಾಚಾರ

ಅತ್ಯಾಚಾರದ ನಂತರ ಆರೋಪಿಗಳು ಪರಾರಿ:

ಅತ್ಯಾಚಾರದ ನಂತರ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪ್ರಭು ಮತ್ತು ಕಿರಣ್​​ನನ್ನು ಬಂಧಿಸಲು ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.

ಇತ್ತ ಜಮೀನಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸ್ಥಳೀಯರೊಬ್ಬರು ನೋಡಿದ್ದಾರೆ. ಈಕೆಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ತಕ್ಷಣ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ಮದುವೆಯಾಗಿ ಗಂಡನಿಂದ ದೂರವಿದ್ದು, ಸಹೋದರಿಯ ಮನೆಯಲ್ಲಿ ಕೆಲ ದಿನಗಳಿಂದ ಆಶ್ರಯ ಪಡೆದಿದ್ದಳು.

ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 5, 2022, 6:36 PM IST

For All Latest Updates

TAGGED:

ABOUT THE AUTHOR

...view details