ದಾವಣಗೆರೆ: ರಂಭಾಪುರಿ ಸ್ವಾಮೀಜಿ, ಒಕ್ಕಲಿಗ ನಿರಂಜನಾ ಸ್ವಾಮೀಜಿ ಸೇರಿದಂತೆ ನನ್ನ ಫೋನ್ ಕೂಡ ಟ್ರ್ಯಾಪ್ ಆಗಿದೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
'ರಂಭಾಪುರಿ ಶ್ರೀ, ನಿರಂಜನಾ ಸ್ವಾಮೀಜಿ ಸೇರಿ ನನ್ನ ಫೋನ್ ಕೂಡ ಟ್ರ್ಯಾಪ್ ಆಗಿದೆ' - ರಿಯಲ್ ಎಸ್ಟೇಟ್ ಉದ್ಯಮಿ
ಶಾಸಕ ಶಾಮನೂರು ಶಿವಶಂಕರಪ್ಪ ಅವರು ಫೋನ್ ಟ್ರ್ಯಾಪ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ರಂಭಾಪುರಿ ಶ್ರೀ, ನಿರಂಜನಾ ಸ್ವಾಮೀಜಿ ಸೇರಿದಂತೆ ನನ್ನ ಪೋನ್ ಕೂಡ ಫೋನ್ ಟ್ರ್ಯಾಪ್ ಆಗಿದೆ ಎಂದಿದ್ದಾರೆ.
ಶಾಮನೂರು ಶಿವಶಂಕರಪ್ಪ
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಂಭಾಪುರಿ ಶ್ರೀಗಳ ಫೋನ್ ಟ್ರ್ಯಾಪ್ ಆಗಿದೆ ಎಂದು ಹೇಳಲಾಗ್ತಿದೆ. ಒಕ್ಕಲಿಗರ ನಿರಂಜನಾ ಶ್ರೀಗಳ ಫೋನ್ ಕೂಡ ಟ್ರ್ಯಾಪ್ ಆಗಿದೆ, ನನ್ನದು ಸೇರಿ ಎಲ್ಲರದ್ದು ಫೋನ್ ಟ್ರ್ಯಾಪ್ ಮಾಡಲಾಗಿದೆ ಎಂದರು.
ನಮ್ಮದು ಟ್ರ್ಯಾಪ್ ಮಾಡಿದರೆ ಏನು ಸಿಗುತ್ತೆ, ರಿಯಲ್ ಎಸ್ಟೇಟ್ ಉದ್ಯಮಿಗಳ ಫೋನ್ ಟ್ರ್ಯಾಪ್ ಮಾಡಿದರೆ ಏನಾದರು ಸಿಗಬಹುದು ಎಂದು ಕಿಡಿಕಾರಿದರು.