ದಾವಣಗೆರೆ: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಪಶುವೈದ್ಯೆ ಹತ್ಯಾಚಾರ ಪ್ರಕರಣ..ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ: ಪ್ರಮೋದ್ ಮುತಾಲಿಕ್ - Rama Sena chief Pramod Muthalik
ತೆಲಂಗಾಣದ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ದಾವಣಗೆರೆಯಲ್ಲಿ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮೋದ್ ಮುತಾಲಿಕ್
ನಗರದಲ್ಲಿ ನಡೆದ ಶ್ರೀರಾಮ ಸೇನೆಯ ರಾಜ್ಯ ಕಾರ್ಯಕಾರಿಣಿ ಬೈಠಕ್ ನಲ್ಲಿ ಮಾತನಾಡಿದ ಅವರು, ಕೋರ್ಟ್‌ನ ವಿಳಂಬ ನ್ಯಾಯ ನೀತಿ ಇದಕ್ಕೆ ಕಾರಣವಾಗಿದೆ. ಇಂತಹ ಇನ್ನೆಷ್ಟು ಪ್ರಕರಣ ನಡೆಯುವವರೆಗೆ ಕಾಯುತ್ತಿರಿ? ಅನ್ಯ ಪ್ರಕರಣಗಳನ್ನು ಬದಿಗಿಟ್ಟು, ನ್ಯಾಯಾಲಯ ಇಂಥಾ ಪ್ರಕರಣಗಳಿಗೆ ಮೂರ‍್ನಾಲ್ಕು ತಿಂಗಳಲ್ಲಿ ತೀರ್ಪು ನೀಡಬೇಕು. ಭಯೋತ್ಪಾದನೆ ವಿಚಾರಣೆಗೆ ರಾತ್ರಿ 12ಕ್ಕೆ ಸುಪ್ರೀಂಕೋರ್ಟ್ ಕೆಲಸ ಮಾಡುತ್ತದೆ. ಆದರೆ, ಅತ್ಯಾಚಾರ ಆರೋಪಿಗಳ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.