ದಾವಣಗೆರೆ: ಕೋಮುವಾದಿ ಪಕ್ಷವನ್ನು ದೂರ ಇಡಬೇಕೆಂದುಕೊಂಡವರು ಯಾಕೆ ವಿಪ್ ಜಾರಿ ಮಾಡ್ಬೇಕು? ಎಂದು ಪ್ರತಿಪಕ್ಷಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಪ್ರಶ್ನಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನವನ್ನು ನಾವು ಗೆಲ್ಲುವುದು ಖಚಿತ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
'ಕೋಮುವಾದಿ ಪಕ್ಷವನ್ನು ದೂರ ಇಡಬೇಕೆಂದವರು ಯಾಕೆ ವಿಪ್ ಜಾರಿ ಮಾಡ್ಬೇಕು?' - Whip enforcement by congress
ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನವನ್ನು ನಾವು ಗೆಲ್ಲುವುದು ಖಚಿತ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಹಾಗು ಕಾಂಗ್ರೆಸ್ನವರು ಒಬ್ಬರ ಮೇಲೊಬ್ಬರು ಮುಗ್ಗಿಬಿದ್ದು ಕಿತ್ತಾಡುತ್ತಿರುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಎರಡೂ ಪಕ್ಷದವರು ಹೀಗೆ ಒದ್ದಾಡ್ತಿರೋದು ಸೂಕ್ತ, ಚುನಾವಣೆಯಲ್ಲಿ ನಾವು ಮೂರು ಸ್ಥಾನ ಗೆಲ್ಲುವುದು ಕೂಡಾ ಸೂಕ್ತ. ಅವರ ಸದಸ್ಯರ ಮೇಲೆ ವಿಪ್ ಜಾರಿ ಮಾಡುವ ಸಿದ್ದರಾಮಯ್ಯನವರು ಆತ್ಮಸಾಕ್ಷಿ ಎಂದು ಮಾತನಾಡುತ್ತಾರೆ. ಎಲ್ಲಿದೆ ಆತ್ಮಸಾಕ್ಷಿ ಎಂದು ಪ್ರಶ್ನೆ ಮಾಡಿದರು. ನಾನೇ ಎಷ್ಟೋ ಅಲ್ಪಸಂಖ್ಯಾತರಿಗಾಗಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ್ದೇನೆ, ಅದೇಗೆ ಕೋಮುವಾದಿಗಳಾಗುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದ್ದು ಆತ್ಮಸಾಕ್ಷಿಯೇ?: ಬಿಜೆಪಿ ಟೀಕೆ