ಕರ್ನಾಟಕ

karnataka

ETV Bharat / state

ಚನ್ನಗಿರಿಯಲ್ಲಿ ಅಬ್ಬರಿಸಿದ ವರುಣ: ಕೋಡಿ ಬಿದ್ದ ಕೆರೆ, ಕೊಚ್ಚಿ ಹೋದ ಬೆಳೆ - ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಅಬ್ಬರ

ಬೆಣ್ಣೆ ನಗರಿಯಲ್ಲಿ ಅಬ್ಬರಿಸಿದ ವರುಣನಿಂದ ಬಹುತೇಕ ಹಳ್ಳ, ಕೊಳ್ಳಗಳು ತುಂಬಿವೆ. ಚನ್ನಗಿರಿ, ಹರಿಹರ ತಾಲೂಕಿನಲ್ಲಿ ತೋಟ, ಗದ್ದೆಗಳೆಲ್ಲ ಹಳ್ಳ, ನಾಲೆಗಳಂತೆ ಕಾಣುತ್ತಿವೆ.

ದಾವಣಗೆರೆ ಜಿಲ್ಲೆಯ ಅಬ್ಬರಿಸ ವರುಣ

By

Published : Oct 22, 2019, 3:18 PM IST

ದಾವಣಗೆರೆ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಒಂದೇ ದಿನದಲ್ಲಿ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿವೆ. ಚನ್ನಗಿರಿ, ಹರಿಹರ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ತೋಟ, ಗದ್ದೆಗಳು ಹಳ್ಳದಂತಾಗಿವೆ. ಎರಡು ತಾಲೂಕಿನಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ.

ದಾವಣಗೆರೆ ಜಿಲ್ಲೆಯ ಅಬ್ಬರಿಸ ವರುಣ

ಮಾವಿನಹೊಳೆ ಕೆರೆಗೆ ಕೋಡಿಬಿದ್ದಿದ್ದು, ಹರಿದ್ರಾವತಿಹಳ್ಳ, ಹಿರೇಹಳ್ಳ ಉಕ್ಕಿ ಹರಿಯುತ್ತಿವೆ. ಹಿರೇಹಳ್ಳ ತುಂಬಿ ಹರಿಯುತ್ತಿರುವುದರಿಂದ ಹಳ್ಳದ ತೀರದ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ರಾಗಿ ನೆಲಕಚ್ಚಿವೆ.

ಚನ್ನಗಿರಿ ತಾಲೂಕಿನಲ್ಲಿಯೇ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೆರೆ ದಡದಲ್ಲಿ ನೀರು ಕುಡಿಯಲು ಹೋಗಿದ್ದ ಎರಡು ಎತ್ತುಗಳು ಮೃತಪಟ್ಟ ಘಟನೆ ದೋಣಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ABOUT THE AUTHOR

...view details