ಕರ್ನಾಟಕ

karnataka

ETV Bharat / state

ರಾಗಿಗುಡ್ಡ ಗಲಭೆ ಪೂರ್ವನಿಯೋಜಿತ ಸಂಚು: ಮಾಜಿ ಶಾಸಕ ರೇಣುಕಾಚಾರ್ಯ - ಬಹುಸಂಖ್ಯಾತ ಹಿಂದೂಗಳ ಭಾವನೆ

ಶಿವಮೊಗ್ಗದ ರಾಗಿಗುಡ್ಡ ಹಾಗೂ ಶಾಂತಿ ನಗರ ಪ್ರದೇಶದಲ್ಲಿ ನಡೆದಂತಹ ಗಲಭೆ ಪೂರ್ವನಿಯೋಜಿತ ಸಂಚು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ರೇಣುಕಾಚಾರ್ಯ
ಮಾಜಿ ಶಾಸಕ ರೇಣುಕಾಚಾರ್ಯ

By ETV Bharat Karnataka Team

Published : Oct 5, 2023, 7:32 PM IST

ಮಾಜಿ ಶಾಸಕ ರೇಣುಕಾಚಾರ್ಯ

ದಾವಣಗೆರೆ :ಶಿವಮೊಗ್ಗದ ರಾಗಿಗುಡ್ಡ ಹಾಗೂ ಶಾಂತಿ ನಗರ ಪ್ರದೇಶದಲ್ಲಿ ನಡೆದಂತಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಒಬ್ಬ ಮತಾಂಧ. ಅವನನ್ನು ವೈಭವೀಕರಿಸಿ ಕರ್ನಾಟಕವನ್ನು ತಾಲಿಬಾನ್ ರಾಜ್ಯ ಮಾಡೋಕೆ ಹೊರಟಿರುವುದು ನಡೆಯುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.

ಗೃಹ ಸಚಿವ ಪರಮೇಶ್ವರ್ ಹೇಳಿಕೆ ಪ್ರಚೋದನೆ ಕೊಟ್ಟಂತೆ ಆಗುತ್ತೆ. ಸಣ್ಣ ಘಟನೆ ಅಂತ ಹೇಳೋದು ಮತ್ತಷ್ಟು ಪ್ರಚೋದನೆ ಕೊಟ್ಟಂತೆ ಆಗುತ್ತೆ. ಶಿವಮೊಗ್ಗದ ಜನ ತತ್ತರಿಸಿ ಹೋಗಿದ್ದಾರೆ. ಇಡೀ ನಾಡಿನಲ್ಲಿ ಗಣೇಶೋತ್ಸವ ಸಮಿತಿಗಳು, ಹಳ್ಳಿ ಗಲ್ಲಿಯಿಂದ ಪಟ್ಟಣದವರೆಗೆ ಎಲ್ಲಾ ಕಡೆ ನಿಮಜ್ಜನವನ್ನು ಬಹಳ ವಿಜೃಂಭಣೆಯಿಂದ ಮಾಡಿದ್ದಾರೆ. ಇನ್ನೂ ಕೆಲವು ಕಡೆ ನಿಮಜ್ಜನ ಇದೆ. ಇದುವರೆಗೆ ಒಂದೇ ಒಂದು ಸಣ್ಣ ಕಹಿ ಘಟನೆಗಳು ನಡೆದಿಲ್ಲ. ಶಾಂತ ರೀತಿಯಿಂದ ಕುಣಿದು ಕುಪ್ಪಳಿಸಿ, ವಾದ್ಯಗಳ ಮೆರವಣಿಗೆ ಮೂಲಕ ಯುವಕರು ಮೆರವಣಿಗೆ ಮಾಡುತ್ತಾರೆ. ಒಂದು ಕಹಿ ಘಟನೆ ನಡೆದಿಲ್ಲ. ತೋರಿಸಿ ನೋಡೋಣ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ರು.

ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಅವರ ಭಾವಚಿತ್ರವನ್ನು ಅಳವಡಿಸಿ, ತಲ್ವಾರ್​ ಪ್ರದರ್ಶಿಸಿ ಅಟ್ಟಹಾಸ ಮೆರೆದರಲ್ಲ. ಆಗ ಜಿಲ್ಲಾಡಳಿತ ಸತ್ತು ಹೋಗಿತ್ತಾ?. ಇವೆಲ್ಲಾ ಘಟನೆಗಳಿಗೆ ಜಿಲ್ಲಾಡಳಿತವೇ ಕಾರಣ. ಅದನ್ನು ತಕ್ಷಣವೇ ತೆರವುಗೊಳಿಸಬೇಕಾಗಿತ್ತು. ದೊಡ್ಡ ದೊಡ್ಡ ತಲ್ವಾರ್​ಗಳನ್ನು ನಿರ್ಮಿಸಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದು ಪೂರ್ವ ನಿಯೋಜಿತ ಸಂಚು ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಹಿಂದೂ ಮಹಾಗಣಪತಿ ಉತ್ಸವ ನಡೆಯಿತಲ್ಲ. ಆಗ ಲಕ್ಷಾಂತರ ಹಿಂದುಗಳು ಅಲ್ಲಿ ಸೇರುತ್ತಾರೆ. ಬನ್ನಿ ನೀವು ಅಲ್ಪಸಂಖ್ಯಾತರು ಪಾಲ್ಗೊಳ್ಳಿ. ಕೆಲವು ಕಡೆ ಗಣೇಶ ನಿಮಜ್ಜನದ ವೇಳೆ ಮುಸಲ್ಮಾನ ಬಾಂಧವರು ನೃತ್ಯ ಮಾಡಿದ್ದಾರೆ. ಭಾವೈಕ್ಯತೆ ಅಂದ್ರೆ ತಾವು ಪಾಲ್ಗೊಳ್ಳಬೇಕು. ತಲ್ವಾರ್ ಹಿಡಿದಿಲ್ಲ ಎನ್ನುತ್ತೀರಿ. ತಲ್ವಾರ್​ ಹಿಡಿದಿರುವ ವಿಡಿಯೋ ಸಾಕ್ಷಿ ಇದೆ. ಇದಕ್ಕಿಂತ ಇನ್ನೇನು ಹೇಳಬೇಕು?. ರಾಗಿ ಗುಡ್ಡದಲ್ಲಿ ಕಡಿಮೆ ಹಿಂದುಗಳು ಇದ್ದರು. ಇವರ ಗಲಾಟೆಗೆ ಹೆದರಿ ಬಹಳಷ್ಟು ಜನ ಅಲ್ಲಿಂದ ಹೋಗಿದ್ದಾರೆ.

ಒಂದು ಕಡೆ ಜೀವ ಭಯ, ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಬಡವರ ಮನೆಗಳನ್ನು ಒಡೆದು ಹಾಕಿದ್ದಾರೆ. ಇದುವರೆಗೆ ಅವರಿಗೆ ಪರಿಹಾರ ಕೊಟ್ಟಿಲ್ಲ. ಈ ಕೂಡಲೇ ಅವರಿಗೆ ಸರ್ಕಾರ ಪರಿಹಾರ ನೀಡಬೇಕು, ಮತ್ತು ನಿರ್ದಾಕ್ಷಿಣ್ಯವಾಗಿ ಯಾರು ಘಟನೆಯಲ್ಲಿ ಭಾಗಿಯಾಗಿದ್ದಾರೆ, ಅವರನ್ನು ಬಂಧಿಸಿದರೆ ಸಾಲದು, ಎನ್​ಕೌಂಟರ್​ ಮಾಡಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ. ಕೇಂದ್ರ ಸರ್ಕಾರ ಯಾವಾಗ ಪಿಎಫ್​ಐ ಸಂಘಟನೆಯನ್ನು ನಿಷೇಧ ಮಾಡಿತೋ, ನಂತರ ಇಂತಹ ಘಟನೆಗಳು ಮರುಕಳಿಸಿ ಬರುತ್ತಿವೆ. ನಾನು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಹೇಳಲು ಇಚ್ಛೆಪಡುತ್ತೇನೆ. ಕೇವಲ ಅಲ್ಪಸಂಖ್ಯಾತ ಮತಗಳಿಂದ ಸರ್ಕಾರ ಬಂದಿಲ್ಲ. ಕಾಂಗ್ರೆಸ್​ನವರು ವೋಟ್ ಬ್ಯಾಂಕಿಗಾಗಿ ಕೀಳುಮಟ್ಟದ ರಾಜಕಾರಣ ಮಾಡಬೇಡಿ ಎಂದರು.

ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಅರ್ಥ ಮಾಡಿಕೊಳ್ಳಿ. ಹಿಂದುಗಳು ಏನೂ ತಪ್ಪು ಮಾಡಿಲ್ಲ. ಅಮಾಯಕ ಹಿಂದೂಗಳನ್ನ ಬಂಧಿಸಬಾರದು ಎಂದು ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ:ಶಿವಮೊಗ್ಗ ಕಲ್ಲು ತೂರಾಟ ಪ್ರಕರಣ: ರಾಗಿಗುಡ್ಡಕ್ಕಿಂದು ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ

ABOUT THE AUTHOR

...view details