ದಾವಣಗೆರೆ :ನಗರದಲ್ಲಿ ನವಜೋಡಿಗೆ ರಾಜರತ್ನ ನಟ ಪುನೀತ್ ರಾಜ್ಕುಮಾರ್ ( puneeth rajkumar) ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ (Dr. B.R Ambedkar) ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಡಿಸಿಸಿ ಮುಖಂಡರು ಅಭಿಮಾನವನ್ನು ಮೆರೆದಿದ್ದಾರೆ.
ಮದುವೆಯಾದ ನವಜೋಡಿಗೆ ಅಪ್ಪು-ಅಂಬೇಡ್ಕರ್ ಭಾವಚಿತ್ರ ನೀಡಿ ಹಾರೈಸಿದ ಸ್ನೇಹಿತರು.. ನಗರದ ವಿಠ್ಠಲ್ ಸಮುದಾಯ ಭವನದಲ್ಲಿ ನಡೆದ ಅಭಿಲಾಷ್, ಅನುಷಾ ಎನ್ನುವವರ ಮದುವೆಗೆ ಆಗಮಿಸಿದ ದಾವಣಗೆರೆ ಬೇತೂರು ಮಂಜುನಾಥ್ ಹಾಗೂ ಆತನ ಸ್ನೇಹಿತರು ಈ ರೀತಿ ವಿಶೇಷ ಉಡುಗೊರೆ ನೀಡಿ ಅಭಿಮಾನವನ್ನು ಮೆರೆದಿದ್ದಾರೆ.
ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ಸಾಕಷ್ಟು ಜನ ಅಭಿಮಾನಿಗಳಿಗೆ ನೋವುಂಟಾಗಿದೆ. ಅಲ್ಲದೇ, ಅಪ್ಪು ಅವರ ನೇತ್ರದಾನ ಕಾರ್ಯಕ್ಕೆ ಪ್ರೇರಣೆಗೊಂಡು ಸಾಕಷ್ಟು ಜನ ತಮ್ಮ ಕಣ್ಣುಗಳ ದಾನಕ್ಕೆ ಮುಂದೆ ಬಂದಿದ್ದಾರೆ. ಇದೀಗ ಮದುವೆ ಕಾರ್ಯಕ್ರಮಗಳಲ್ಲೂ ಪುನೀತ್ ಭಾವಚಿತ್ರ ನೀಡಿ ಗಮನ ಸೆಳೆದಿರುವುದು ವಿಶೇಷವಾಗಿದೆ.
ಓದಿ:'ನೂರೊಂದು ನೆನಪು'ಗಳನ್ನ ಎದೆಯಾಳದಿಂದ ಮೆಲುಕು ಹಾಕಿದ ನಟಿ ಸುಹಾಸಿನಿ