ಕರ್ನಾಟಕ

karnataka

ETV Bharat / state

ಯಾರನ್ನೋ ಬದುಕಿಸುವ ಸಲುವಾಗಿ ಕಾಮಗಾರಿ ಮಾಡ್ಬೇಡಿ : ಡಿಸಿಎಂ ಕಾರಜೋಳ - davangere news

ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸರಿಯಾದ ಸಮಯಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಡಿಸಿಎಂ ಕಾರಜೋಳ ಸೂಚಿಸಿದರು.

Progress review meeting
ಪ್ರಗತಿ ಪರಿಶೀಲನಾ ಸಭೆ

By

Published : Jan 7, 2021, 11:36 AM IST

ದಾವಣಗೆರೆ: ಯಾರನ್ನೋ ಬದುಕಿಸುವ ಸಲುವಾಗಿ ಕಾಮಗಾರಿ ಮಾಡ್ಬೇಡಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗದರಿದರು.

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾದ ಅವರು ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ತಮ್ಮ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸರಿಯಾದ ಸಮಯಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಕಳೆದ 25 ವರ್ಷಗಳಿಂದ ಎಸ್​ಸಿಪಿ, ಟಿಎಸ್ಪಿ ಯೋಜನೆಗಳಡಿಯಲ್ಲಿ ಚರಂಡಿ, ರಸ್ತೆಗಳ ನಿರ್ಮಾಣದ ಬದಲು ಉದ್ಯೋಗ ಸೃಷ್ಟಿ ಮಾಡುವಂತಹ ಮಳಿಗೆಗಳನ್ನು ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ದಾವಣಗೆರೆಯಲ್ಲಿ ಹೆಚ್ಚು ರಸ್ತೆ, ಚರಂಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಅದನ್ನು ಬಿಟ್ಟು ಬೇರೆ ಕಾಮಗಾರಿಗಳ ಕಡೆ ಗಮನಹರಿಸುವಂತೆ ಮನವಿ ಮಾಡಿದರು.

ಓದಿ:ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಡಿಸ್ಚಾರ್ಜ್: ಆಸ್ಪತ್ರೆ ಬಳಿ ದಾದಾ ಮಾತು! ವಿಡಿಯೋ

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸಂಸದ ಸಿದ್ದೇಶ್ವರ್, ಶಾಸಕ ಪ್ರೋ. ಲಿಂಗಣ್ಣ ಭಾಗಿಯಾಗಿದ್ದರು.

ABOUT THE AUTHOR

...view details