ಕರ್ನಾಟಕ

karnataka

ETV Bharat / state

ನೀರಿಲ್ಲದೆ ಬರಡಾಗಿದ್ದ ಕೆರೆಗೆ ಮರುಜೀವ; ಸ್ವಂತ ಖರ್ಚಿನಲ್ಲಿ ನೀರು ಹರಿಸಿದ ಭಗೀರಥರು ಇವರು.. - ದಾವಣಗೆರೆ ಕೆರೆ

ದೇವರಹಳ್ಳಿಗೆ ಬಹುಪಾಲು ಕೃಷಿ ಹಾಗೂ ಕುಡಿಯುವ ನೀರಿನ ಮೂಲವಾಗಿದ್ದ ನಾಡಿಗರ ಕೆರೆಗೆ ಮತ್ತೆ ಮರುಹುಟ್ಟು ಸಿಕ್ಕಂತಾಗಿದೆ. ವರ್ಷದಿಂದ ಒಣಗಿ ನಿಂತಿದ್ದ ಕೆರೆಗೆ ಗ್ರಾಮಸ್ಥರೇ ಸೇರಿ ನೀರು ಹರಿಸಿದ್ದಾರೆ. ಇದೀಗ ಸಂಪೂರ್ಣ ಭರ್ತಿಯಾಗಿ ಸ್ಥಳೀಯರಿಗೆ ಸಂತಸ ತರಿಸಿದೆ.

public-joins-hands-for-give-newlife-for-lake
ಸ್ವಂತ ಹಣ ಖರ್ಚು ಮಾಡಿ ನೀರು ಹರಿಸಿದ ಭಗೀರಥರು

By

Published : Aug 29, 2021, 9:14 AM IST

ದಾವಣಗೆರೆ: ಸುತ್ತಳ್ಳಿಗೆ ಜೀವನಾಡಿಯಾಗಿದ್ದ ಕೆರೆ ಕೆಲ ವರ್ಷದಿಂದ ಬತ್ತಿ ಹೋಗಿ ಕೃಷಿಗೆ ಮಾತ್ರವಲ್ಲ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಆದರೆ ಈ ಕುರಿತು ಜನಪ್ರತಿನಿಧಿಗಳಿಗೆ ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಇತ್ತ ಗಮನ ಹರಿಸಿರಲಿಲ್ಲ. ಹೀಗಾಗಿ ಜನಪ್ರತಿನಿಧಿಗಳಿಗೆ ಕಾಯದೇ ಗ್ರಾಮಸ್ಥರೇ ಒಟ್ಟಾಗಿ ಕೆರೆಗೆ ಮರುಜೀವ ನೀಡಿದ್ದಾರೆ.

ಸ್ವಂತ ಹಣ ಖರ್ಚು ಮಾಡಿ ನೀರು ಹರಿಸಿದ ಭಗೀರಥರು

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿರುವ ನಾಡಿಗರ ಎಂಬ ಐತಿಹಾಸಿಕ ಕೆರೆಗೆ ಆಧುನಿಕ ಭಗೀರಥರು ನೀರಿ ಹರಿಸಿದ್ದಾರೆ. ಜನಸಾಮಾನ್ಯರ ಹಾಗೂ ರೈತರ ಜೀವ ಸೆಲೆಯಾಗಿದ್ದ ಕೆರೆಗೆ ಇದೀಗ ಜೀವ ಕಳೆ ಬಂದಿದೆ. ಗ್ರಾಮಸ್ಥರು ಸ್ವಂತ ಹಣದಲ್ಲಿ ನಾಡಿಗರ ಕೆರೆಗೆ ನೀರು ಹರಿಸಿದ್ದಾರೆ. ಇದಕ್ಕೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಕೂಡ ಆರ್ಥಿಕವಾಗಿ ನೆರವಾಗಿದ್ದಾರೆ.

ಕನಿಷ್ಠ 25 ಲಕ್ಷ ರೂ. ವ್ಯಯ ಮಾಡಿ ಸೂಳೆಕೆರೆ (ಶಾಂತಿ ಸಾಗರ)ದಿಂದ ಪೈಪ್​ಲೈನ್ ಮೂಲಕ ಕೆರೆಗೆ ನೀರು ತುಂಬಿಸಿದ್ದಾರೆ. ಬಸವರಾಜು ವಿ ಶಿವಗಂಗಾ ಅವರು 6 ಲಕ್ಷಕ್ಕೂ ಅಧಿಕ ಹಣವನ್ನ ಕೆರೆ ಪೈಪ್ ಲೈನ್‍ಗೆ ನೀಡಿದ್ದು, ಉಳಿದ ಹಣವನ್ನ ಗ್ರಾಮಸ್ಥರು ಒಟ್ಟುಗೂಡಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಕೆರೆಗೆ ನೀರು ಬಂದಿದ್ದು, ಇದೀಗ ಇಡೀ ಕೆರೆ ಭರ್ತಿಯಾಗಿದೆ. ಈ ಹಿನ್ನೆಲೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಸರ್ಕಾರ ಮತ್ತು ಜನಪ್ರತಿನಿಧಿಗಳು ಮುಂದೆ ನಿಂತು ಮಾಡಬೇಕಾದ ಕಾರ್ಯವನ್ನ ಗ್ರಾಮಸ್ಥರೇ ಮಾಡಿ ಮುಗಿಸಿದ್ದಾರೆ. ಐತಿಹಾಸಿಕ ಕೆರೆಗೆ ಮರುಜೀವ ನೀಡಿ ಸುತ್ತಲಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಂಡಿದ್ದಾರೆ.

ಓದಿ:ಕಾಮಗಾರಿಯಿಂದ ಸೂರು ಕಳೆದುಕೊಂಡ ಬಡ ಕುಟುಂಬ: ಅಧಿಕಾರಿಗಳ ವಿರುದ್ಧ ಓಬಮ್ಮ ಆಕ್ರೋಶ

ABOUT THE AUTHOR

...view details