ದಾವಣಗೆರೆ: ಏಕಪತ್ನಿ ವ್ರತಸ್ಥ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಆಕ್ರೋಶ ಹೊರಹಾಕಿದ್ದು, ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ದಾವಣಗೆರೆ ಪಾಲಿಕೆಯ 20ನೇ ವಾರ್ಡ್ನ ಉಪಚುನಾವಣಾ ಪ್ರಚಾರದ ಮುನ್ನ ಮಾತನಾಡಿದ ಅವರು, ಸುಧಾಕರ್ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು, ಸಚಿವರಾಗಿ ಮುಂದುವರೆಯುವುದಕ್ಕೆ ಅವರಿಗೆ ನೈತಿಕತೆ ಇಲ್ಲ ಎಂದಿದ್ದಾರೆ.
ರಾಜ್ಯದ ಆರೂವರೆ ಕೋಟಿ ಜನರನ್ನ ಪ್ರತಿನಿಧಿಸುತ್ತಾರೆ, ಅವರು ಆ ಹುದ್ದೆಗೆ ಕಳಂಕ ತರುವಂತ ಕೆಲಸ ಮಾಡಕೂಡದು. ಅದಲ್ಲದೆ ಮಾಧ್ಯಮದಲ್ಲಿ ಅಶ್ಲೀಲ ವಿಡಿಯೋ ಬಿತ್ತರಿಸದಂತೆ ಕೋರ್ಟ್ ಆರ್ಡರ್ ತಂದಿದ್ದಾರೆ. ಅವರ ಮೇಲೆ ಎರಡು ಗಂಭೀರ ಆರೋಪಗಳಿವೆ, ಕೂಡಲೇ ಅವರು ರಾಜೀನಾಮೆ ನೀಡಬೇಕು. ತನಿಖೆ ಎದುರಿಸಿ ಅವರು ಪ್ರಾಮಾಣಿಕರು ಅನ್ನೋದನ್ನ ರುಜುವಾತು ಮಾಡಿ ಬಳಿಕ ಮಂತ್ರಿಯಾಗಲಿ ಎಂದರು.