ಕರ್ನಾಟಕ

karnataka

ETV Bharat / state

ಶಾಲೆ ಆರಂಭದ ಬಳಿಕ ಮಕ್ಕಳ ಮೇಲೆ ಮಾನಸಿಕ-ದೈಹಿಕ ಪರಿಣಾಮ - Schools open

ಸದಾ ಚಟುವಟಿಕೆಯಿಂದ ಮಕ್ಕಳು ಲಾಕ್​ಡೌನ್​ನಿಂದಾಗಿ ತಮ್ಮ ಆಪ್ತ ಸ್ನೇಹಿತರನ್ನು ಭೇಟಿಯಾಗದ ಕಾರಣ ಮೌನಕ್ಕೆ ಶರಣಾಗಿದ್ದಾರೆ. ಜೊತೆಗೆ ಮಕ್ಕಳ ಆಹಾರದ ಸೇವೆನೆ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ಪೋಷಕರು.

school children's
ಶಾಲಾ ಮಕ್ಕಳು

By

Published : Jan 30, 2021, 10:42 PM IST

ದಾವಣಗೆರೆ: ಎಂಟು ತಿಂಗಳ ಬಳಿಕ ಶಾಲಾ-ಕಾಲೇಜುಗಳನ್ನು ತೆರೆಯಲಾಗಿದೆ. ಲಾಕ್​​ಡೌನ್ ಅವಧಿಯಲ್ಲಿ ದೂರದರ್ಶನ ಹಾಗೂ ಮೊಬೈಲ್‌ಗೆ ಹೊಂದಿಕೊಂಡಿದ್ದ‌ ಮಕ್ಕಳ ಮೇಲೆ ಶಾಲೆ ಆರಂಭದ ಬಳಿಕ ದೈಹಿಕ ಮತ್ತು ಮಾನಸಿಕ ಪರಿಣಾಮ ಬೀರಿದೆ ಎನ್ನಲಾಗಿದೆ.

ಕೊರೊನಾ ನಿಯಂತ್ರಣಕ್ಕೆ ಬಂದ ಕಾರಣ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿತ್ತು. ಕೊರೊನಾ ಸಮಯದಲ್ಲಿ ಶಾಲೆಗೆ ತೆರಳದೆ ಮೊಬೈಲ್‌ ಹಾಗೂ ದೂರದರ್ಶನದ ತರಗತಿಗಳೇ ರೂಢಿಯಾಗಿವೆ. ಇದೀಗ ಶಾಲೆಗೆ ಹೋಗಿ ಅಂತಾ ಪೋಷಕರು ಹೇಳುತ್ತಿದ್ದರೆ ಮಕ್ಳಳು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕೆಲವರು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಪೋಷಕರು ಹೇಳುತ್ತಿದ್ದಾರೆ.

ಇದನ್ನೂ ಓದಿ...ಮೇಲ್ಮನೆಯಲ್ಲಿ ಅಶ್ಲೀಲ ಚಿತ್ರ ನೋಡಿರುವುದು ಖಂಡನೀಯ: ರೇಣುಕಾಚಾರ್ಯ

ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂಬುದಿಲ್ಲ. ಆನ್​ಲೈನ್​ ತರಗತಿಗಳನ್ನೇ ಮುಂದುವರಿಸಬಹುದು ಎಂದು ಹೇಳಿದೆ. ಕೆಲ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ಮತ್ತೆ ಕೆಲವರು ಕೊರೊನಾ ಭೀತಿಯಿಂದಾಗಿ ಆನ್​​ಲೈನ್ ತರಗತಿಗಳನ್ನೇ ಕೊಡಿಸಿದ್ದಾರೆ.

ಪೋಷಕಿ ವಿನುತಾ ರವಿ ಅವರ ಮಾತು

ಆದರೆ, ಕೆಲವರು ಪೋಷಕರ ಬಲವಂತದಿಂದಾಗಿ ಶಾಲೆ ಕಡೆ ಮುಖ ಮಾಡಿದ್ದು, ಆಕಾಶವೇ ತಲೆ‌ ಮೇಲೆ ಬಿದ್ದಂತೆ ಆಡುತ್ತಿದ್ದಾರೆ. ನಾವು ಶಾಲೆಗೆ ಹೋಗಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಸದಾ ಚಟುವಟಿಕೆಯಿಂದ ಇದ್ದ ಮಕ್ಕಳು ಲಾಕ್​ಡೌನ್​ನಿಂದಾಗಿ ತಮ್ಮ ಆಪ್ತ ಸ್ನೇಹಿತರನ್ನು ಭೇಟಿಯಾಗದ ಕಾರಣ ಮೌನಕ್ಕೆ ಶರಣಾಗಿದ್ದಾರೆ. ಜೊತೆಗೆ ಮಕ್ಕಳ ಆಹಾರದ ಸೇವೆನೆ ಮೇಲೂ ಪರಿಣಾಮ ಬೀರಿದೆ ಎನ್ನುತ್ತಾರೆ ಪೋಷಕರು.

ಈಗಾಗಲೇ ಮಕ್ಕಳು ಮಾನಸಿಕವಾಗಿ ಆರೋಗ್ಯ ಹದಗೆಡುವ ಹಂತಕ್ಕೆ ತಲುಪಿದ್ದು, ಅವರನ್ನು ಮುಕ್ತವಾಗಿ ಬಿಡಬೇಕು. ಆಟವಾಡಲು, ಧ್ಯಾನ ಮಾಡಲು, ವ್ಯಾಯಮ, ಯೋಗ ಹೀಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ. ಈ ಮೂಲಕ ಮಕ್ಕಳ ಏಕಾಗ್ರತೆ ಸುಧಾರಿಸಬೇಕಿದೆ.

ABOUT THE AUTHOR

...view details