ದಾವಣಗೆರೆ:ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚಿ ಮನೆಗೆ ಕಳುಹಿಸಲು 50 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಪಿಎಸ್ಐ ಹಾಗೂ ಪೊಲೀಸ್ ಕಾನಸ್ಟೇಬಲ್ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶಿವನಗೌಡ ಹಾಗೂ ಪೋಲಿಸ್ ಕಾನಸ್ಟೇಬಲ್ ಲಿಂಗರಾಜ್ ನಾಯ್ಕ ಲೋಕಾಯುಕ್ತ ಬಲೆಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ:ಬೇರೊಬ್ಬನ ಜೊತೆ ರೀಲ್ಸ್ ಮಾಡಿದಳೆಂದು ಪ್ರಿಯತಮೆಯನ್ನೇ ಕೊಂದ ಪ್ರೇಮಿ: ಆರೋಪಿ ಬಂಧನ
ಚಿತ್ರದುರ್ಗ ಮೂಲದ ರಂಗಸ್ವಾಮಿ ಎಂಬುವರಿಂದ ಫೋನ್ ಪೇ ಮೂಲಕ 50 ಸಾವಿರ ಲಂಚ ಸ್ವೀಕರಿಸಿದ್ದ ಪಿಎಸ್ಐ ಹಾಗೂ ಪಿಸಿಯನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದರು. ನಂತರ ಲೋಕಾಯುಕ್ತ ಪೊಲೀಸರು ತೋಡಿದ್ದ ಖೆಡ್ಡಾಕ್ಕೆ ಪಿಎಸ್ಐ ಹಾಗೂ ಪಿಸಿ ಬಿದ್ದಿದ್ದಾರೆ.
ಇದನ್ನೂ ಓದಿ:ಅತೀಕ್, ಅಶ್ರಫ್ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಬೆದರಿಕೆ ಹಾಕಿದ ಅಲ್ ಖೈದಾ
ಫೋನ್ ಮೂಲಕ ಲಂಚ ಸ್ವೀಕರಿಸಿದ ಪಿಎಸ್ಐ ಹಾಗೂ ಪಿಸಿ:ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಮಹಿಳೆಯೊಬ್ಬರು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಾಣೆಯಾದ ಮಹಿಳೆ ದಾವಣಗೆರೆಯಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ದಾವಣಗೆರೆ ಗ್ರಾಮೀಣ ಪೋಲಿಸರು ಮಹಿಳೆಯನ್ನು ಪತ್ತೆ ಹಚ್ಚಿ ಮನೆಗೆ ಕಳುಹಿಸಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಫೋನ್ ಪೇಗೆ ದುಡ್ಡು ಹಾಕುವಂತೆ ಪಿಎಸ್ಐ ಹಾಗೂ ಪಿಸಿ ಹೇಳಿದ್ದಾರೆ. ಶನಿವಾರ ಫೋನ್ ಮೂಲಕ ಹಣ ಸ್ವೀಕರಿಸಿದ ವೇಳೆ ಲೋಕಾಯುಕ್ತ ಪೊಲೀಸರು, ಪಿಎಸ್ಐ ಹಾಗೂ ಪಿಸಿ ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇನಸ್ಪೆಕ್ಟರ್ಗಳಾದ ರಾಷ್ಟ್ರಪತಿ ಹಾಗೂ ಅಂಜನೇಯ ಅವರಿಂದ ದಾಳಿ ನಡೆಸಲಾಗಿದೆ.
ಇದನ್ನೂ ಓದಿ:ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್