ದಾವಣಗೆರೆ :ರಾಜಸ್ಥಾನದ ಉದಯಪುರದಲ್ಲಿ ನಡೆದ ಬಡ ಟೈಲರ್ ಶಿರಚ್ಛೇದ ಪ್ರಕರಣವನ್ನು ಖಂಡಿಸಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಟೈಲರನ್ನು ಹತ್ಯೆ ಮಾಡಿದ ನರಹಂತಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರದ ಜಯದೇವ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾಕಷ್ಟು ಜನ ಟೈಲರ್ ಗಳು ಭಾಗಿಯಾಗಿದ್ದರು. ಜೊತೆಗೆ ಕೆಲ ಮುಸ್ಲಿಂ ಟೈಲರ್ ಗಳೂ ಹತ್ಯೆಯನ್ನು ಖಂಡಿಸಿ ನರಹಂತಕರನ್ನು ಗಲ್ಲಿಗೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ವೇಳೆ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಕೆ. ಜಿ ಯಲ್ಲಪ್ಪ ಮಾತನಾಡಿ, ಈ ಹತ್ಯೆಯಿಂದ ಇಡೀ ದೇಶದ ಜನರು ದಿಗ್ಭ್ರಮೆಗೊಂಡಿದ್ದಾರೆ. ಅಮಾನುಷವಾಗಿ ಬಡ ಟೈಲರ್ ಹತ್ಯೆ ಮಾಡಲಾಗಿದ್ದು, ಇದು ಖಂಡನೀಯ ಎಂದರು.