ಕರ್ನಾಟಕ

karnataka

ಮಾಜಿ ಶಾಸಕ ಬಿ ಎಂ ತಿಪ್ಪೇಸ್ವಾಮಿಯವರ ಸಮಾಧಿ ಹಾನಿ.. ದಾವಣಗೆರೆಯಲ್ಲಿ ತೀವ್ರಗೊಂಡ ಹೋರಾಟ

By

Published : Nov 24, 2022, 4:58 PM IST

ಮಾಜಿ ಶಾಸಕ ನೇತ್ರ ತಜ್ಞ ಡಾ ಬಿ ಎಂ ತಿಪ್ಪೇಸ್ವಾಮಿ ಸಮಾಧಿ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ದಲಿತ ಸಂಘಟನೆ ಹಾಗೂ ತಿಪ್ಪೇಸ್ವಾಮಿ ಕುಟುಂಬಸ್ಥರಿಂದ ಪ್ರತಿಭಟನೆ ಆರಂಭವಾಗಿದೆ.

ಪ್ರಗತಿಪರ ಹೋರಾಟಗಾರ ದ್ವಾರಕನಾಥ್​
ಪ್ರಗತಿಪರ ಹೋರಾಟಗಾರ ದ್ವಾರಕನಾಥ್​

ದಾವಣಗೆರೆ: ಮಾಜಿ ಶಾಸಕ ನೇತ್ರ ತಜ್ಞ ಡಾ ಬಿ ಎಂ ತಿಪ್ಪೇಸ್ವಾಮಿ ಸಮಾಧಿ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಅವರ ಪುತ್ರಿ ಜಾಹ್ನವಿ ಅವರು ಕೆಟಿಜೆ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ರು ಯಾವುದೇ ಪ್ರಯೋಜ‌ ಆಗಿಲ್ಲವಂತೆ. ಆದ್ದರಿಂದ ತಕ್ಷಣ ಸಮಾಧಿ ನಾಶ ಮಾಡಿದ ಆರೋಪಿ ಕಾಂಗ್ರೆಸ್​ ಮುಖಂಡ ಹುಲ್ಲುಮನೆ ಗಣೇಶ್ ಅವರನ್ನು ಬಂಧಿಸುವಂತೆ ಹೋರಾಟ ಆರಂಭವಾಗಿದೆ.

ದಲಿತ ಸಂಘಟನೆ ಹಾಗೂ ತಿಪ್ಪೇಸ್ವಾಮಿ ಕುಟುಂಬಸ್ಥರಿಂದ ಪ್ರತಿಭಟನೆ ಆರಂಭವಾಗಿದ್ದು, ಖ್ಯಾತ ಪ್ರಗತಿಪರ ಹೋರಾಟಗಾರ ದ್ವಾರಕನಾಥ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ರು. ದಾವಣಗೆರೆ ನಗರದ ವಿದ್ಯುತ್ ಕಾಲೋನಿಯಲ್ಲಿರುವ ಡಾ ಬಿ ಎಂ ತಿಪ್ಪೇಸ್ವಾಮಿ ಸಮಾಧಿ ಇರುವ ಇಪ್ಪತು ಗುಂಟೆ ಜಾಗವನ್ನು ನಕಲಿ ದಾಖಲೆ ಸೃಷ್ಠಿ ಮಾಡಿ ಜಮೀನು ಕಬ್ಜ ಮಾಡಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಅವರ ಪುತ್ರಿ ಜಾಹ್ನವಿ ಆರೋಪ ಮಾಡಿದ್ದರು.

ಜಮೀನು ಖರೀದಿ ಮಾಡಿ ಸಮಾಧಿ ಒಡೆದಿದ್ದಾರೆ ಎನ್ನಲಾದ ಕಾಂಗ್ರೆಸ್ ಮುಖಂಡ ಗಣೇಶ ಹುಲ್ಮನೆ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಧ್ವಂಸವಾದ ಸಮಾಧಿಯ ಪೂಜೆ ಸಲ್ಲಿಸಿ ಜಾಗ ಕಬಳಿಸಲು ಯತ್ನಿಸುತ್ತಿರುವ ಕೈ ಮುಖಂಡ ಹುಲ್ಲಮನೆ ಗಣೇಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ಮಾಡಲಾಯಿತು.

ಪ್ರಗತಿಪರ ಹೋರಾಟಗಾರ ದ್ವಾರಕನಾಥ್​

ಸಮಾಧಿಗೆ ರಕ್ಷಣೆ ನೀಡುವಂತೆ ಒತ್ತಾಯ: ನೂರಾರು ದಲಿತ ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸಮಾಧಿ ಧ್ವಂಸ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಗೆ ಕೆಟಿಜೆ ನಗರ ಪೊಲೀಸರು ಭಿಗಿ ಭದ್ರತೆ ಒದಗಿಸಿದ್ರು. ಇನ್ನು ಸಮಾಧಿ ಒಡೆದು ಹಾಕಿದವರನ್ನು ಪೊಲೀಸರು ಬಂಧಿಸಿಲ್ಲ, ಈಗಾಗಲೇ ದೂರು ಕೂಡ ನೀಡಲಾಗಿದೆ. ತಕ್ಷಣ ತಪ್ಪಿತಸ್ಥರನ್ನು ಬಂಧಿಸಬೇಕು. ಸಮಾಧಿಗೆ ರಕ್ಷಣೆ ನೀಡ್ಬೇಕು ಎಂದು ಸರ್ಕಾರಕ್ಕೆ ಪ್ರಗತಿಪರ ಹೋರಾಟಗಾರ ದ್ವಾರಕನಾಥ್ ಮನವಿ ಮಾಡಿದರು.

ಓದಿ:ರಿಯಲ್ ಎಸ್ಟೇಟ್ ದಂಧೆ: ಇಪ್ಪತ್ತು ಗುಂಟೆ ಜಾಗ ಕಬಳಿಸಲು ಮಾಜಿ ಶಾಸಕನ ಸಮಾಧಿ ನಾಶ; ದೂರು ದಾಖಲು

ABOUT THE AUTHOR

...view details