ಕರ್ನಾಟಕ

karnataka

ETV Bharat / state

ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಸ್ವಾಮೀಜಿ ವಿರುದ್ಧ ಪ್ರತಿಭಟನೆ - protest in davanagere

ಪ್ರವಾದಿ ಮೊಹಮ್ಮದ್ ರವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಗಾಜಿಯಬಾದ್​ನ ದಾಸ್ನಾ ದೇವಿ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಸರಸ್ವತಿಯವರ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ ನಡೆದಿದೆ.

protest against narasinmhananda saraswathi
ಪ್ರತಿಭಟನೆ

By

Published : Apr 10, 2021, 2:00 PM IST

ದಾವಣಗೆರೆ:ಗಾಜಿಯಾಬಾದ್​ನ ದಾಸ್ನಾ ದೇವಿ ದೇವಸ್ಥಾನದ ಮಹಂತಯತಿ ನರಸಿಂಹಾನಂದ ಸರಸ್ವತಿಯವರು ಪ್ರವಾದಿ ಮೊಹಮ್ಮದ್ ರವರ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ದಾವಣಗೆರೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ಅಖ್ತರ್ ರಜಾ ವೃತ್ತದಲ್ಲಿ ಪ್ರತಿಭಟಿಸಿದ ಸಮುದಾಯದ ಮುಖಂಡರು, ನರಸಿಂಹಾನಂದ ಸರಸ್ವತಿ ಅವರನ್ನು ತಕ್ಷಣ ಬಂಧಿಸುವಂತೆ ಸಂಬಂಧಪಟ್ಟ ಪೊಲೀಸರಿಗೆ ಮನವಿ ಮಾಡಿದರು‌. ಹೊಸದಿಲ್ಲಿಯಲ್ಲಿರುವ ಪ್ರೆಸ್ ಕ್ಲಬ್ ಆಫ್‌ ಇಂಡಿಯಾದಲ್ಲಿ ಹಿಂದುತ್ವ ಸಂಘಟನೆ ಅಖಿಲ ಭಾರತೀಯ ಸಂತ ಪರಿಷದ್ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನರಸಿಂಹಾನಂದ ಸರಸ್ವತಿಯವರು ಪ್ರವಾದಿಯವರ ವಿರುದ್ಧ ಕೆಲ ಟೀಕೆಗಳನ್ನು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಮುಸ್ಲಿಂ ಬಾಂಧವರು ಜೆಡಿಎಸ್ ವಕ್ತಾರ ಅಮಾನುಲ್ಲ ಖಾನ್ ರವರ ನೇತೃತ್ವದಲ್ಲಿ ನರಸಿಂಹಾನಂದ ಸರಸ್ವತಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ABOUT THE AUTHOR

...view details