ದಾವಣಗೆರೆ: ಕೊರೊನಾ ವೈರಸ್ ಸೋಂಕು ಹರಡುವ ಭೀತಿಯನ್ನೂ ಲೆಕ್ಕಿಸದೆ ನಗರದ ಅಶೋಕ ಚಿತ್ರಮಂದಿರದ ಬಳಿ ಲಾಕ್ಡೌನ್ ಉಲ್ಲಂಘಿಸಿ ಅನವಶ್ಯಕವಾಗಿ ಓಡಾಡುತ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.
ಲಾಕ್ಡೌನ್ ಸಡಿಲಿಕೆ: ದಾವಣಗೆರೆಯಲ್ಲಿ ಬೇಕಾಬಿಟ್ಟಿ ರಸ್ತೆಗಿಳಿಯುತ್ತಿರುವ ಜನ! - Corona Effect in Davangere
ದಾವಣಗೆರೆಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ್ದನ್ನು ಕೆಲವರು ದುರುಪಯೋಗಪಡಿಸಿಕೊಂಡು ರಸ್ತೆಗಿಳಿಯುತ್ತಿದ್ದಾರೆ. ಕೆಲವರು ಆಸ್ಪತ್ರೆ, ಮೆಡಿಕಲ್ ಶಾಪ್ಗೆ ಹೋಗಿ ಔಷಧ ತರಬೇಕು ಎಂದು ಕಾರಣ ನೀಡುತ್ತಿದ್ದು, ಪೊಲೀಸರಿಗೆ ತಲೆ ನೋವು ತಂದಿದೆ.
ತುರ್ತು ಕೆಲಸ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡುತ್ತಲೇ ಇವೆ. ಆದ್ರೆ ಜನರು ಮಾತ್ರ ಕ್ಯಾರೇ ಎನ್ನದೇ ತಿರುಗಾಡತೊಡಗಿದ್ದಾರೆ. ಈಗಾಗಲೇ ನಗರದಲ್ಲಿ ಲಾಕ್ಡೌನ್ ಸ್ವಲ್ಪ ಸಡಿಲಿಕೆ ಮಾಡಲಾಗಿದ್ದು, ಕೆಲ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.
ಜಿಲ್ಲಾಡಳಿತ ಯಾವ್ಯಾವ ಕ್ಷೇತ್ರಗಳ ನಿರ್ಬಂಧ ಸಡಿಲಿಕೆ ಮಾಡಿದೆಯೋ ಈ ಕ್ಷೇತ್ರಗಳ ವ್ಯಾಪ್ತಿಗೊಳಪಟ್ಟವರು, ಪಾಸ್ ಹೊಂದಿದವರು, ತುರ್ತು ಕೆಲಸ ಇದ್ದವರಿಗೆ ಮಾತ್ರ ಸಂಚರಿಸಲು ಅನುಮತಿ ಇದೆ. ಬೇರೆ ಬೇರೆ ಕಾರಣ ನೀಡಿ ಅನಗತ್ಯವಾಗಿ ತಿರುಗಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಹನುಮಂತರಾಯ ಎಚ್ಚರಿಸಿದ್ದಾರೆ.