ದಾವಣಗೆರೆ :ಪೊಲೀಸ್ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಆಡಿಯೋ ಶೇರ್ ಮಾಡಿರುವ ಆರೋಪ ಕೇಳಿ ಬಂದಿದೆ.
ದಾವಣಗೆರೆ: ಪೊಲೀಸ್ ಸಿಬ್ಬಂದಿ ವಿರುದ್ಧ ಪಾಕ್ ಪರ ಆಡಿಯೋ ಶೇರ್ ಮಾಡಿದ ಆರೋಪ
ದಾವಣೆಗೆರೆಯ ಪೊಲೀಸ್ ಸಿಬ್ಬಂದಿಯೊಬ್ಬರು ಪಾಕಿಸ್ತಾನ ಪರ ಆಡಿಯೋ ಶೇರ್ ಮಾಡಿರುವ ಆರೋಪ ಕೇಳಿ ಬಂದಿದೆ.
ಪವರ್ ಆಫ್ ಪಾಕಿಸ್ತಾನ ಎಂಬ ಫೇಸ್ಬುಕ್ ಪೇಜ್ ಮತ್ತು 2008 ರ ಬ್ಯಾಚ್ ಪೊಲೀಸ್ ಟೀಂ ಎಂಬ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ನಗರದ ಬಸವನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸನಾವುಲ್ಲಾ ಪಾಕಿಸ್ತಾನ ಪರ ಆಡಿಯೋ ಶೇರ್ ಮಾಡಿದ್ದಾರೆ ಎನ್ನಲಾಗಿದೆ.
2014 ರಲ್ಲಿ ಕೂಡ ಸನಾವುಲ್ಲಾ ಇದೇ ರೀತಿ ದೇಶವಿರೋಧಿ ಪೋಸ್ಟ್ ಹಾಕಿ ಸಸ್ಪೆಂಡ್ ಆಗಿದ್ದರು. ಈಗ ಮತ್ತೊಂದು ಆಡಿಯೋ ಶೇರ್ ಮಾಡಿ ವಿವಾದಕ್ಕೊಳಗಾಗಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಹನುಮಂತರಾಯ ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಕಾನ್ಸ್ಟೇಬಲ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.