ಕರ್ನಾಟಕ

karnataka

ETV Bharat / state

ಆಗ್ನೇಯ ಪದವೀಧರ ಕ್ಷೇತ್ರದ ಮತದಾನಕ್ಕೆ ದಾವಣಗೆರೆಯಲ್ಲಿ ಸಿದ್ಧತೆ - South East Graduates Voting

ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಮ್ಮ ಅಧಿಕಾರಿಗಳೊಂದಿಗೆ ಆಗಮಿಸಿ ಚುನಾವಣೆ ಸಿದ್ಧತೆ ಪರಿಶೀಲಿಸಿದರು.

Preparing for Southeast Graduate Constituency Voting
ಆಗ್ನೇಯ ಪದವೀಧರ ಕ್ಷೇತ್ರದ ಮತದಾನಕ್ಕೆ ಸಿದ್ಧತೆ

By

Published : Oct 27, 2020, 5:07 PM IST

ದಾವಣಗೆರೆ :ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಾಳೆ (ಅಕ್ಟೋಬರ್ 28) ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಆಗ್ನೇಯ ಪದವೀಧರ ಕ್ಷೇತ್ರದ ಮತದಾನಕ್ಕೆ ಸಿದ್ಧತೆ

ಒಟ್ಟು 20,962 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 3 ವಿಶೇಷ ಮತಗಟ್ಟೆಗಳು ಸೇರಿದಂತೆ ಒಟ್ಟು 32 ಮತಗಟ್ಟೆಗಳನ್ನು ಗುರುತಿಸಲಾಗಿದೆ. ದಾವಣಗೆರೆ ನಗರದಲ್ಲಿ 18 ಮತಗಟ್ಟೆಗಳಿದ್ದು, 7,439 ಪುರುಷರು, 5,429 ಮಹಿಳೆಯರು, ದಾವಣಗೆರೆ ಗ್ರಾಮಾಂತರದಲ್ಲಿ 4 ಮತಗಟ್ಟೆಗಳಿದ್ದು, 1,412 ಪುರುಷ, 664 ಮಹಿಳೆಯರು, ಹರಿಹರದಲ್ಲಿ 6 ಮತಗಟ್ಟೆಗಳಿದ್ದು, 2,558 ಪುರುಷ, 1,516 ಮಹಿಳೆಯರು, ಜಗಳೂರಿನಲ್ಲಿ 1,410 ಪುರುಷ ಹಾಗೂ 534 ಮಹಿಳಾ ಮತದಾರರು ಮತ ಹಾಕಲಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದ ಮತದಾನಕ್ಕೆ ಸಿದ್ಧತೆ

ಮತದಾನ ನಡೆಯುವ ಹಿನ್ನೆಲೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಎಎಸ್ಪಿ ರಾಜೀವ್ ಸೇರಿದಂತೆ ಅಧಿಕಾರಿಗಳು ಚುನಾವಣೆ ಸಿದ್ಧತೆ ಪರಿಶೀಲಿಸಿದರು. ನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿರುವ ಮಸ್ಟರಿಂಗ್ ಸೆಂಟರ್​ಗೆ ಭೇಟಿ ನೀಡಿ, ಮತಗಟ್ಟೆಗಳಿಗೆ ತೆರಳಲು ಸಿಬ್ಬಂದಿ ನಡೆಸುತ್ತಿದ್ದ ಸಿದ್ಧತೆಯನ್ನು ಪರಿಶೀಲಿಸಿ ಸೂಚನೆ ನೀಡಿದರು. ಈ ವೇಳೆ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಇತರ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಆಗ್ನೇಯ ಪದವೀಧರ ಕ್ಷೇತ್ರದ ಮತದಾನಕ್ಕೆ ಸಿದ್ಧತೆ

ABOUT THE AUTHOR

...view details